Thursday, June 4, 2026
Homeಕರಾವಳಿಪುತ್ತೂರು; ಕೌಡಿಚ್ಚಾರ್ ಬಳಿ ಬೈಕ್ ಅಪಘಾತ ವೃದ್ಧ ಸಾವು

ಪುತ್ತೂರು; ಕೌಡಿಚ್ಚಾರ್ ಬಳಿ ಬೈಕ್ ಅಪಘಾತ ವೃದ್ಧ ಸಾವು

- Advertisement -
- Advertisement -

ಪುತ್ತೂರು: ಬೈಕ್ ಅಪಘಾತವಾಗಿ ವೃದ್ಧ ಸಾವನ್ನಪ್ಪಿ, ಯುವಕ ಗಾಯಗೊಂಡ  ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರ್ ಬಳಿ ನಡೆದಿದೆ. ಕಾವು ಮಿನೋಜಿಕಲ್ಲು ನಾರಾಯಣ ನಾಯ್ಕ ಎಂದು ಮೃತ ದುರ್ದೈವಿ. ಉಬರಡ್ಕ ನಿವಾಸಿ ಗುರುಪ್ರಸಾದ್ ಗಾಯಗೊಂಡ ಯುವಕ.

ಅಪಘಾತವಾಗಿ ಬಿದ್ದಿದ್ದ ಗಾಯಾಳುಗಳನ್ನು ಅದೇ ದಾರಿಯಾಗಿ ಕಚೇರಿಯಿಂದ ಬರುತ್ತಿದ್ದ ಪುತ್ತೂರಿನ ಯುವ ನ್ಯಾಯವಾದಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಚಿನ್ಮಯ್ ರೈ ಈಶ್ವರಮಂಗಲ, ಅರಿಯಡ್ಕ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಸಚಿನ್ ರೈ ಪಾಪೆಮಜಲು ಹಾಗೂ ಹಿಂಜಾವೆ ಪ್ರಮುಖ ಜಗದೀಶ್ ಜೊತೆಗೂಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ನಾರಾಯಣ ನಾಯ್ಕ್ ಮೃತಪಟ್ಟಿದ್ದರು ಎನ್ನಲಾಗಿದೆ. ಗಾಯಾಳು ಯುವಕನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!