Thursday, June 4, 2026
Homeಕರಾವಳಿಸುಳ್ಯ; ಬೆಳ್ಳಾರೆ ಸರ್ಕಾರಿ ಆಸ್ಪತ್ರೆಯ ಹಳೆ ಕಟ್ಟಡ ತೆರವು ವೇಳೆ ಗೋಡೆ ಕುಸಿತ; ವ್ಯಕ್ತಿ ಸಾವು

ಸುಳ್ಯ; ಬೆಳ್ಳಾರೆ ಸರ್ಕಾರಿ ಆಸ್ಪತ್ರೆಯ ಹಳೆ ಕಟ್ಟಡ ತೆರವು ವೇಳೆ ಗೋಡೆ ಕುಸಿತ; ವ್ಯಕ್ತಿ ಸಾವು

- Advertisement -
- Advertisement -

ಸುಳ್ಯ; ಹಳೆ ಕಟ್ಟಡ ತೆರವು ಮಾಡುತ್ತಿದ್ದ ವೇಳೆ ಗೋಡೆ ಕುಸಿದು ಬಿದ್ದು ಓರ್ವ ಮೃತಪಟ್ಟ ಘಟನೆ ಬೆಳ್ಳಾರೆ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಮಂಜುನಾಥ(23) ಮೃತ ದುರ್ದೈವಿ .ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಹಳೆ ಕಟ್ಟಡದ ತೆರವು ಕಾರ್ಯ ನಡೆಯುತ್ತಿತ್ತು.

ಹೀಗಾಗಿ ಗೋಡೆ ಕೆಡವುತ್ತಿದ್ದಾಗ ಏಕಾಏಕಿ ಗೋಡೆ ಕಾರ್ಮಿಕ ಮಂಜುನಾಥ್ ಅವರ ಮೇಲೆ ಬಿದ್ದಿದೆ.ಅವಶೇಷಗಳಡಿ ಸಿಲುಕಿದ್ದ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಈ ವೇಳೆ ಅವರು ಮೃತಪಟ್ಟಿದ್ದಾರೆ‌ ಎನ್ನಲಾಗಿದೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

- Advertisement -

Latest News

error: Content is protected !!