Sunday, October 18, 2026
Homeಕರಾವಳಿಮಂಗಳೂರು; ತಂಡವೊಂದು ಚೂರಿ ತೋರಿಸಿ ಬೆದರಿಕೆ ಹಾಕಿದ ಆರೋಪ, ದೂರು ದಾಖಲು

ಮಂಗಳೂರು; ತಂಡವೊಂದು ಚೂರಿ ತೋರಿಸಿ ಬೆದರಿಕೆ ಹಾಕಿದ ಆರೋಪ, ದೂರು ದಾಖಲು

- Advertisement -
- Advertisement -

ಮಂಗಳೂರು : ತಂಡವೊಂದು ತನ್ನ  ಚೂರಿ ತೋರಿಸಿ ಬೆದರಿಕೆ ಹಾಕಿದೆ ಎಂದು ಮಹಿಳೆಯೊಬ್ಬರು  ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನ್ನ ಪತಿ ಗಣೇಶ್ ಶೆಟ್ಟಿ ಭಾನುವಾರ ರಾತ್ರಿ ಕೂಳೂರಿನ ಹೊಟೇಲೊಂದರ ಮುಂದೆ ಪೋನ್‌ನಲ್ಲಿ ಮಾತನಾಡುತ್ತಿದ್ದಾಗ ಪರಿಚಯದ ಸುಧೀರ್ ಎಂಬಾತ ಅವಾಚ್ಯವಾಗಿ ಬೈದು ಕೈಯಿಂದ ದೂಡಿದ್ದಾನೆ.ಬಳಿಕ ಕೆಲವು ಮಂದಿ ಪತಿಯನ್ನು ಎಳೆದುಕೊಂಡು ಹೋದಾಗ ಬಿಡಿಸಲು ಯತ್ನಿಸಿದ ತನಗೆ ಮತ್ತು ಕೆಲಸದಾಳು ಚಂದ್ರಹಾಸ ಎಂಬವರ ಮೇಲೆ ಕೂಡ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಪತಿಗೆ ಆರೋಪಿ ಸುಧೀರ್ ಚೂರಿ ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಬಬಿತಾ ಜಿ.ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!