Sunday, June 7, 2026
Homeಉತ್ತರ ಕನ್ನಡಮೀನೂಟ ಸೇವಿಸಿ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ? ಫೋಟೋ ವೈರಲ್

ಮೀನೂಟ ಸೇವಿಸಿ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ? ಫೋಟೋ ವೈರಲ್

- Advertisement -
- Advertisement -

ಕಾರವಾರ: ಇತ್ತೀಚೆಗಷ್ಟೇ ಭಟ್ಕಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೀನೂಟ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ ವೈರಲ್‌ ಆಗಿದ್ದು ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಫೆ.19ರ ಭಾನುವಾರದಂದು ಕಾರವಾರದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿ.ಟಿ.ರವಿ ನಂತರ ಭಟ್ಕಳಕ್ಕೆ ತೆರಳಿದ್ರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಮೀನೂಟ ಸೇವಿಸಿ ನಂತರ ಸಮೀಪದ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಹೋಗಿದ್ದಾರೆ. ಸಿ.ಟಿ. ರವಿ ಮೀನೂಟ ಸೇವಿಸಿದ ಫೋಟೋ ವೈರಲ್‌ ಆಗಿದೆ. ಸದ್ಯ ಈ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ಹಿಂದೆ ಬಾಡೂಟ ಸೇವಿಸಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಿರುವ ವಿಚಾರದ ಕುರಿತು ಬಿಜೆಪಿಗರು ಕಿಡಿಕಾರಿದ್ರು. ಇದೀಗ  ಕಾಂಗ್ರೆಸ್ಸಿಗರು ಬಿಜೆಪಿಯವರನ್ನು ಪ್ರಶ್ನೆ ಮಾಡುವಂತಾಗಿದೆ.

- Advertisement -

Latest News

error: Content is protected !!