Friday, June 5, 2026
Homeಕರಾವಳಿಉಡುಪಿಮಣಿಪಾಲ ಕಾಲೇಜಿನ ಪ್ರೊಫೆಸರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮಣಿಪಾಲ ಕಾಲೇಜಿನ ಪ್ರೊಫೆಸರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಮಣಿಪಾಲ: ಮಣಿಪಾಲ ಕಾಲೇಜಿನ ಪ್ರೊಫೆಸರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ದಶರಥ ನಗರ ಎಂಬಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ, ಮಣಿಪಾಲದ ಆರ್ಕಿಟೆಕ್ಟ್‌ ಕಾಲೇಜಿನ ಪ್ರಾಧ್ಯಾಪಕ ಅಹಮದ್‌ ಮಿರ್ಜಾ ಆತ್ಮಹತ್ಯೆ ಮಾಡಿಕೊಂಡವರು. ಖಾಸಗಿ ವಸತಿಗೃಹದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಇವರು ಸಾವನ್ನಪ್ಪಿ ನಾಲ್ಕು ದಿನ ಕಳೆದಿರಬಹುದು ಎಂದು ಹೇಳಲಾಗಿದೆ. ಮೃತದೇಹವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲಾಗಿದೆ.

- Advertisement -

Latest News

error: Content is protected !!