Wednesday, June 3, 2026
Homeಕರಾವಳಿಬೆಳ್ತಂಗಡಿ : ಕಾಶಿಪಟ್ಣದಲ್ಲಿ ಸ್ಕೂಟರ್ ಗೆ ಆಟೋ ಡಿಕ್ಕಿ: ಸ್ಕೂಟರ್ ಸವಾರ ಸಾವು

ಬೆಳ್ತಂಗಡಿ : ಕಾಶಿಪಟ್ಣದಲ್ಲಿ ಸ್ಕೂಟರ್ ಗೆ ಆಟೋ ಡಿಕ್ಕಿ: ಸ್ಕೂಟರ್ ಸವಾರ ಸಾವು

- Advertisement -
- Advertisement -

ಬೆಳ್ತಂಗಡಿ: ರಿಕ್ಷಾ  ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಎಂಬಲ್ಲಿ ಇಂದು ಸಂಜೆ 5.30 ವೇಳೆಗೆ ನಡೆದಿದೆ.

ಕಾಶಿಪಟ್ಣ ಅಂಬಡ ಎಂಬಲ್ಲಿಯ ಮೆನ್ಪ ಪೂಜಾರಿಯ ಪುತ್ರ ನಿತ್ಯಾನಂದ ಪೂಜಾರಿ ( 52) ಮೃತ ದುರ್ದೈವಿ. ಇಂದು ಸಂಜೆ ಹೊಸಂಗಡಿಯ ಬಡಕೋಡಿಯ ತಾಯಿ ಮನೆಯಿಂದ ನಿತ್ಯಾನಂದ ಅವರು ತನ್ನ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾಶಿಪಟ್ಣ ಮಸೀದಿ ಬಳಿ ರಿಕ್ಷಾವೊಂದು ಇವರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟು ಮುಖಕ್ಕೆ ಹಾಗೂ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ನಿತ್ಯಾನಂದ ಪೂಜಾರಿ ಅವರು ಕೃಷಿಕರಾಗಿದ್ದು, ಇವರ ಪತ್ನಿ ಮಲ್ಲಿಕಾ ನಾರಾವಿ ಗ್ರಾಮ ಪಂಚಾಯತ್ ಸದಸ್ಯೆ. ಮೃತರಿಗೆ ಇಬ್ಬರು ಎರಡು ಮಕ್ಕಳಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!