Friday, June 5, 2026
Homeಕರಾವಳಿಸುಳ್ಯ:ಟೈಟ್ ಆಗಿ ಜೀಪು ಚಲಾಯಿಸಿ ಅವಾಂತರಕ್ಕೆ ಕಾರಣವಾದ ಚಾಲಕ

ಸುಳ್ಯ:ಟೈಟ್ ಆಗಿ ಜೀಪು ಚಲಾಯಿಸಿ ಅವಾಂತರಕ್ಕೆ ಕಾರಣವಾದ ಚಾಲಕ

- Advertisement -
- Advertisement -

ಸುಳ್ಯ: ಫುಲ್ ಟೈಟ್ ಆಗಿ ಜೀಪ್ ಚಾಲಕನೋರ್ವ ಜೀಪು ಚಲಾಯಿಸಿ ಅವಾಂತರ ಸೃಷ್ಟಿ ಮಾಡಿರುವ  ಘಟನೆ ಸುಳ್ಯದ ಅಂಬಟಡ್ಕದಲ್ಲಿ ನಡೆದಿದೆ. ನಾಲ್ಕು ಬೈಕ್ ಮತ್ತು ಒಂದು ಕಾರು ಡಿಕ್ಕಿಗೆ ಜೀಪು ಡಿಕ್ಕಿಯಾಗಿದೆ.

ಸುಳ್ಯದ ಮುಖ್ಯ ರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಸ್ಥಾನದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಗುದ್ದಿದೆ.  ನಂತರ ಅಲ್ಲಿಂದ ಅಂಬಟಡ್ಕಲ್ಲಿರುವ ಹೊಟೇಲ್ ಒಂದರ ಎದುರು ನಿಲ್ಲಿಸಿದ್ದ ಗ್ರಾಹಕರ ನಾಲ್ಕು ಬೈಕ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ.ಜೀಪು ಚಾಲಕನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.

- Advertisement -

Latest News

error: Content is protected !!