Thursday, June 4, 2026
Homeಕರಾವಳಿಬೆಳ್ಳಾರೆ; ಮಧ್ಯರಾತ್ರಿ ಅಡಿಕೆ ಕದ್ದು ಬಸ್ ನಿಲ್ದಾಣದಲ್ಲಿ ಸುಲಿದು ಎಸ್ಕೇಪ್ ಆದ ಕಳ್ಳರು

ಬೆಳ್ಳಾರೆ; ಮಧ್ಯರಾತ್ರಿ ಅಡಿಕೆ ಕದ್ದು ಬಸ್ ನಿಲ್ದಾಣದಲ್ಲಿ ಸುಲಿದು ಎಸ್ಕೇಪ್ ಆದ ಕಳ್ಳರು

- Advertisement -
- Advertisement -

ಬೆಳ್ಳಾರೆ: ಮಧ್ಯರಾತ್ರಿ ಅಡಿಕೆ ಕದ್ದು ಬಸ್ ನಿಲ್ದಾಣದಲ್ಲಿ ಸುಲಿದು ಕಳ್ಳರು ಎಸ್ಕೇಪ್ ಆದ ಘಟನೆ ಬೆಳ್ಳಾರೆ ಸಮೀಪದ  ಎಣ್ಮೂರಿನಲ್ಲಿ ನಡೆದಿದೆ.ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ನಿಲ್ದಾಣದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು  ಸ್ಥಳದಲ್ಲಿ ರಾಶಿ ಅಡಿಕೆ ಸಿಪ್ಪೆ, ನಾಲ್ಕೈದು ಅಡಿಕೆ, ಕಬ್ಬಿಣದ ರಾಡ್ ಪತ್ತೆಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಳ್ಳರು ಸ್ಥಳೀಯರೇ ಇರಬೇಕು ಎಂದು ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದಾರೆ.

ಎಣ್ಮೂರಿನಲ್ಲಿ ಈ ಮೊದಲು ಬೀಟ್ ಪೊಲೀಸರ  ರಾತ್ರಿ ಹೊತ್ತು ತಪಾಸಣೆ ಮಾಡುತ್ತಿದ್ದರು. ಆದರೆ ಇದೀಗ ಪೊಲೀಸರು ಅತ್ತ ಸುಳಿಯದಿರುವುದರಿಂದ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.ಅಡಿಕೆ ದರ ಏರುತ್ತಿರುವ ಬೆನ್ನಲ್ಲೇ ಅಡಿಕೆ ಕಳ್ಳರ  ಹಾವಳಿ ಜೋರಾಗಿದ್ದು   ಪೊಲೀಸರು  ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!