Saturday, June 6, 2026
Homeತಾಜಾ ಸುದ್ದಿನಟಿ ದೀಪಿಕಾ ಸಿಂಗ್ ತಾಯಿಗೆ ಕೊರೊನಾ ವೈರಸ್.. !

ನಟಿ ದೀಪಿಕಾ ಸಿಂಗ್ ತಾಯಿಗೆ ಕೊರೊನಾ ವೈರಸ್.. !

- Advertisement -
- Advertisement -

ಮುಂಬೈ ದಿಯಾ ಔರ್ ಬಾತಿ ಹಮ್’ ಹಿಂದಿ ಧಾರಾವಾಹಿ ಖ್ಯಾತಿಯ ನಟಿ ದೀಪಿಕಾ ಸಿಂಗ್ ಅವರ ತಾಯಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಆದರೆ, ಪರೀಕ್ಷೆ ನಡೆಸಿದ ಆಸ್ಪತ್ರೆ ಇದರ ವರದಿಗಳನ್ನು ನೀಡಿಲ್ಲ. ಬದಲಾಗಿ ಆಸ್ಪತ್ರೆ ಸಿಬ್ಬಂದಿ ವರದಿಯ ಫೋಟೋ ತೆಗೆದುಕೊಳ್ಳುವಂತೆ ಹೇಳಿದ್ದಾರೆ.

ಈ ಕುರಿತು ಇನ್​​​ಸ್ಟಾಗ್ರಾಂ ಮೂಲಕ ಕಳವಳ ವ್ಯಕ್ತಪಡಿಸಿರುವ ನಟಿ, ತಮ್ಮ ಕುಟುಂಬಕ್ಕೆ ಆದಷ್ಟು ಬೇಗ ವೈದ್ಯಕೀಯ ನೆರವು ನೀಡುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಒತ್ತಾಯಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನನ್ನ ತಾಯಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ತಾಯಿ ಮತ್ತು ತಂದೆ ದೆಹಲಿಯಲ್ಲಿದ್ದಾರೆ. ಲೇಡಿ ಹಾರ್ಡಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆಯನ್ನು ಮಾಡಲಾಗಿತ್ತು. ಅವರು ವರದಿಗಳನ್ನು ನೀಡದೇ, ಅದರ ಫೋಟೋ ತೆಗೆಯಲು ಮಾತ್ರ ನನ್ನ ತಂದೆಗೆ ಅವಕಾಶ ನೀಡಿದರು. ಸಂಬಂಧಪಟ್ಟವರು ಇದನ್ನು ಓದಿ ಸಹಾಯ ಮಾಡುತ್ತಾರೆಂದು ನಾನು ಭಾವಿಸಿದ್ಧೇನೆ ಎಂದು ಬರೆದಿದ್ದಾರೆ.

- Advertisement -

Latest News

error: Content is protected !!