Saturday, June 27, 2026
Homeತಾಜಾ ಸುದ್ದಿಖ್ಯಾತ ನಟಿ ರಮ್ಯಾಕೃಷ್ಣ ಕಾರಿನಲ್ಲಿ ಸಾಗಿಸ್ತಿದ್ದ 96 ಬಿಯರ್​, 8 ಮದ್ಯದ​ ಬಾಟಲಿ ಪೊಲೀಸ್ ವಶಕ್ಕೆ

ಖ್ಯಾತ ನಟಿ ರಮ್ಯಾಕೃಷ್ಣ ಕಾರಿನಲ್ಲಿ ಸಾಗಿಸ್ತಿದ್ದ 96 ಬಿಯರ್​, 8 ಮದ್ಯದ​ ಬಾಟಲಿ ಪೊಲೀಸ್ ವಶಕ್ಕೆ

- Advertisement -
- Advertisement -

ಚೆನ್ನೈ: ಕನ್ನಡ, ತಮಿಳು, ತೆಲುಗಿನ ಅನೇಕ ಸಿನಿಮಾದಲ್ಲಿ ನಟಿಸಿ ಖ್ಯಾತಿಗಳಿಸಿರುವ ರಮ್ಯಾಕೃಷ್ಣರ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 100 ಮದ್ಯದ ಬಾಟೆಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಮ್ಯಾಕೃಷ್ಣ ಸದ್ಯ ತಮಿಳುನಾಡಿನ ಚೆನ್ನೈನಲ್ಲಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದೆ. ರಮ್ಯಾ ಕೃಷ್ಣ ಮತ್ತು ಅವರ ತಂಗಿ ವಿನಯ​ ಕೃಷ್ಣ ತಮ್ಮ ಇನೋವಾ ಕಾರಿನಲ್ಲಿ ಮಹಾಬಲಿಪುರಂನಿಂದ ಹಿಂತಿರುಗುತ್ತಿದ್ದರು. ಮುತ್ತುಕಾಡು ಚೆಕ್​ಪೋಸ್ಟ್​ನಲ್ಲಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿ 96 ಬಿಯರ್​ ಬಾಟಲ್ ಸೇರಿದಂತೆ 8 ಲಿಕ್ಕರ್​ ಬಾಟಲಿ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನು ಪರಿಶೀಲನೆ ವೇಳೆ ರಮ್ಯಾಕೃಷ್ಣ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಕಾರಿನಲ್ಲಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದ ಕಾರಣಕ್ಕೆ ರಮ್ಯಾ ಕೃಷ್ಣ ಅವರ ಕಾರಿನ ಚಾಲಕ ಸೆಲ್ವಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಚಾಲಕನನ್ನು ರಮ್ಯಾಕೃಷ್ಣ ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!