Monday, June 8, 2026
Homeತಾಜಾ ಸುದ್ದಿಅಧಿಕಾರಕ್ಕೆ ಬರ್ತೀವಿ ಅಂತ ಕಾಂಗ್ರೆಸ್‌ ತಿರುಕನ ಕನಸು ಕಾಣುತ್ತಿದೆ: ಯಡಿಯೂರಪ್ಪ

ಅಧಿಕಾರಕ್ಕೆ ಬರ್ತೀವಿ ಅಂತ ಕಾಂಗ್ರೆಸ್‌ ತಿರುಕನ ಕನಸು ಕಾಣುತ್ತಿದೆ: ಯಡಿಯೂರಪ್ಪ

- Advertisement -
- Advertisement -

ದಾವಣಗೆರೆ: ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರ್ತೀವಿ ಅಂತ ಕಾಂಗ್ರೆಸ್‌ ತಿರುಕನ ಕನಸು ಕಾಣುತ್ತಿದೆ. ತಿರುಕನ ಕನಸು ಕನಸಾಗಿಯೇ ಉಳಿಯುತ್ತದೆಯೇ ಹೊರತು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ದಾವಣಗೆರೆಯಲ್ಲಿ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಹೆಂಡ, ಹಣದ ಬಲದಿಂದ ಚುನಾವಣೆ ಮಾಡಲು ಹೊರಟಿದ್ದಾರೆ. ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ನಾವು ರಾಜ್ಯದ ಎಲ್ಲಾ ಕಡೆ ಪ್ರವಾಸ ಕೈಗೊಂಡಿದ್ದೇವೆ. ಅಲ್ಲಿನ ವಾತಾವರಣವನ್ನು ಕೂಡ ಗಮನಿಸಿದ್ದೇವೆ. ರಾಜ್ಯದ ಎಲ್ಲಾ ಕಡೆ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸುತ್ತಿದ್ದಾರೆ ಎಂದರು.

- Advertisement -

Latest News

error: Content is protected !!