Sunday, June 7, 2026
Homeಕರಾವಳಿಉಡುಪಿಮಹಾರಾಷ್ಟ್ರ ಕನ್ನಡಿಗರ ಗಮನಕ್ಕೆ: 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ, ಮನೆಯಿಂದ ಹೊರ ಬಂದ್ರೆ ಕೇಸ್...

ಮಹಾರಾಷ್ಟ್ರ ಕನ್ನಡಿಗರ ಗಮನಕ್ಕೆ: 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ, ಮನೆಯಿಂದ ಹೊರ ಬಂದ್ರೆ ಕೇಸ್ !

- Advertisement -
- Advertisement -

ಉಡುಪಿ :ಮಹಾರಾಷ್ಟ್ರದಿಂದ ಬಂದವರನ್ನು ಇನ್ನು ಮುಂದೆ 14 ದಿನಗಳ ಹೋಂ ಕ್ವಾರಂಟೈನ್ ಮಾಡಿ ವ್ಯಕ್ತಿ ವಾಸವಾಗಿರುವ ಮನೆಯನ್ನು ಸೀಲ್ ಡೌನ್ ಮಾಡಲಾಗುವುದು. ಒಂದು ವೇಳೆ ಕ್ವಾರಂಟೈನ್ ನಲ್ಲಿರುವ ವ್ಯಕ್ತಿ ಮನೆಯಿಂದ ಹೊರಗಡೆ ಬಂದರೆ ಅಂತವರ ಮೇಲೆ ಪೊಲೀಸ್ ಕೇಸ್ ದಾಖಲಿಸಲಾಗುವುದು ಎಂದು ಅರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ದಿನಂದಿಂದ ದಿನಕ್ಕೆ ಉಡುಪಿಯಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಜಿಲ್ಲೆಗೆ ಇಂದು ಭೇಟಿ ನೀಡಿರುವ ಅರೋಗ್ಯ ಸಚಿವರುಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು.

ಇನ್ನು ಮುಂದೆ ಮಹಾರಾಷ್ಟ್ರದಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡುವ ಬದಲು ಹೋಮ್ ಕ್ವಾರಂಟೈನ್ ಮಾಡಲು ರಾಜ್ಯ ಸರಕಾರ ಹೊಸ ಕ್ರಮಗಳನ್ನು ಕೈಗೊಂಡಿದೆ. ಹಾಗಾಗಿ ಮಹಾರಾಷ್ಟ್ರದಿಂದ ಬಂದವರನ್ನು ಸೀಲ್ ಹಾಕಿಸಿ ಹೋಮ್ ಕ್ವಾರಂಟೈನ್ ಮಾಡಿ ಮನೆಯನ್ನು ಸೀಲ್ ಡೌನ್ ಮಾಡಲಾಗುತ್ತದೆ ಎಂದು ತಿಳಿಸಿದರು.

- Advertisement -

Latest News

error: Content is protected !!