Thursday, May 2, 2024
Homeತಾಜಾ ಸುದ್ದಿಯುವತಿಯರ ಮದುವೆ ವಯಸ್ಸಿನ ಮಿತಿ 21 ವರ್ಷಕ್ಕೆ ಏರಿಕೆ: ಕೇಂದ್ರ ಸರ್ಕಾರ

ಯುವತಿಯರ ಮದುವೆ ವಯಸ್ಸಿನ ಮಿತಿ 21 ವರ್ಷಕ್ಕೆ ಏರಿಕೆ: ಕೇಂದ್ರ ಸರ್ಕಾರ

spot_img
- Advertisement -
- Advertisement -

ನವದೆಹಲಿ: ಯುವತಿಯರ ಮದುವೆಗೆ ನಿಗದಿಪಡಿಸಿದ ಕನಿಷ್ಠ ವಯೋಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತಾಗಿ ವರದಿ ನೀಡಲು ಸಮಿತಿಯನ್ನು ರಚಿಸಲಾಗಿದೆ. ಸಮತಾ ಪಕ್ಷದ ಮಾಜಿ ಅಧ್ಯಕ್ಷರಾದ ಜಯಾ ಜೇಟ್ಲಿ ನೇತೃತ್ವದಲ್ಲಿ 10 ಜನರ ಕಾರ್ಯಪಡೆಯನ್ನು ರಚಿಸಲಾಗಿದೆ. ಪುರುಷರಿಗೆ ಸಮಾನವಾಗಿ 21 ವರ್ಷಕ್ಕೆ ಯುವತಿಯರ ಮದುವೆ ವಯಸ್ಸಿನ ಕನಿಷ್ಠ ವಯೋಮಿತಿ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ.

ಶಿಶುವಿನ ಆರೋಗ್ಯ, ಶಿಶುವಿನ ಮರಣದ ಮೇಲೆ ಮದುವೆಯ ವಯಸ್ಸಿನ ಪರಿಣಾಮ, ತಾಯಂದಿರ ಮರಣ, ಮಾತೃತ್ವ, ಲಿಂಗಾನುಪಾತ, ಫಲವತ್ತತೆಯ ದರ ಮೊದಲಾದ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿ ಸಮಿತಿ ವರದಿ ನೀಡಲಿದೆ. ಈ ಹಿಂದೆ 1978ರಲ್ಲಿ ಮದುವೆ ವಯೋಮಿತಿಯನ್ನು 15 ರಿಂದ 18 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಈಗ 21 ವರ್ಷಕ್ಕೆ ಏರಿಕೆ ಮಾಡಲು ಚಿಂತನೆ ನಡೆದಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!