Sunday, June 7, 2026
Homeಕರಾವಳಿಬೆಳ್ತಂಗಡಿಯ ಪಿಲತ್ತಡ್ಕದಲ್ಲಿ ದನದ ಕೊಟ್ಟಿಗೆಯಲ್ಲಿ ಬೆಂಕಿ ಆಕಸ್ಮಿಕ: ದನ ಕರುಗಳಿಗೆ ಗಾಯ

ಬೆಳ್ತಂಗಡಿಯ ಪಿಲತ್ತಡ್ಕದಲ್ಲಿ ದನದ ಕೊಟ್ಟಿಗೆಯಲ್ಲಿ ಬೆಂಕಿ ಆಕಸ್ಮಿಕ: ದನ ಕರುಗಳಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ: ದನ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ  ದನ ಕರುಗಳು ಗಾಯಗೊಂಡ ಘಟನೆ  ಪಿಲತ್ತಡ್ಕ ಎಂಬಲ್ಲಿ ಭಾನುವಾರ ನಡೆದಿದೆ.

ಇಲ್ಲಿನ ಪೂವಪ್ಪ ಪೂಜಾರಿ ಎಂಬವರ ಪುತ್ರ ಸುರೇಶ ಹೈನುಗಾರಿಕೆ ಮಾಡುತ್ತಿದ್ದು  ಹಾಲು ಕರೆಯುವ ಐದು ದನ ಹಾಗೂ ಇವುಗಳ ಐದು ಕರುಗಳಿವೆ. ಇವುಗಳನ್ನು ಕಟ್ಟಿ ಹಾಕಿದ್ದ ಹಟ್ಟಿಗೆ ಬೆಂಕಿ ತಗುಲಿದ್ದು ಬೈ ಹುಲ್ಲು, ಹಿಂಡಿ ಇನ್ನಿತರ ಸಾಮಗ್ರಿಗಳು ಸುಟ್ಟು ಹೋಗಿವೆ. ಬೆಂಕಿಯಿಂದ ದನ ಕರುಗಳಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿವೆ.

ಮನೆ ಮಂದಿಗೆ ಹಟ್ಟಿಗೆ ಸೊಪ್ಪು ತರಲು ತೆರಳಿದ್ದಾಗ ಪಕ್ಕದ ಮನೆಯ ಶ್ರೀಧರ ಪೂಜಾರಿ ಅವರಿಗೆ ಹಟ್ಟಿಯ ಭಾಗದಿಂದ ಹೊಗೆ ಕಂಡುಬಂದಿದೆ.  ಅಷ್ಟರಲ್ಲಾಗಲೇ ಬೆಂಕಿ ಹಟ್ಟಿಯನ್ನು ವ್ಯಾಪಿಸ ತೊಡಗಿತ್ತು. ಈ ಸಮಯ ದನಕರುಗಳನ್ನು ಕಟ್ಟಿ ಹಾಕಿದ್ದ ಹಗ್ಗಗಳನ್ನು ತುಂಡರಿಸಿ ಹೊರಗೆ ಬಿಟ್ಟಿದ್ದಾರೆ. ಆದರೂ ಬೆಂಕಿ ವ್ಯಾಪಿಸಿ ದನ ಕರುಗಳಿಗೆ ಗಾಯಗಳಾಗಿವೆ.

- Advertisement -

Latest News

error: Content is protected !!