Thursday, October 15, 2026
Homeಕರಾವಳಿಉಡುಪಿಉಡುಪಿ: ಗಾಂಧಿ ಜಯಂತಿ ಅಂಗವಾಗಿ ಮಟ್ಟು ಬೀಚ್ ನಲ್ಲಿ ಸ್ವಚ್ಛತಾ ನಡಿಗೆ

ಉಡುಪಿ: ಗಾಂಧಿ ಜಯಂತಿ ಅಂಗವಾಗಿ ಮಟ್ಟು ಬೀಚ್ ನಲ್ಲಿ ಸ್ವಚ್ಛತಾ ನಡಿಗೆ

- Advertisement -
- Advertisement -

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಸ್ವಚ್ಛತಾ ಹೀ ಸೇವಾ ಆಂದೋಲನ ನಡೆಯಿತು. ಮಟ್ಟು ಬೀಚ್ ನಲ್ಲಿ ಸ್ವಚ್ಛತಾ ನಡಿಗೆ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ವಚ್ಛತಾ ನಡಿಗೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಹಂತದ ವಿವಿಧ ಇಲಾಖೆಗಳ ಮುಖ್ಯಸ್ಥರು, ಕೋಟೆ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಯ ಹಾಸ್ಟೆಲ್ ಗಳ ವಿದ್ಯಾರ್ಥಿಗಳು ಹಾಗೂ ಸಂಜೀವಿನಿ ಸಂಘದ ಸದಸ್ಯರು ಭಾಗವಹಿಸಿದ್ದರು. ಅಲ್ಲದೇ, ಸ್ವಚ್ಛತಾ ನಡಿಗೆಯಲ್ಲಿ ಸುಮಾರು 1000 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಶ್ರಮದಾನದ ಅಂತ್ಯದಲ್ಲಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು

- Advertisement -

Latest News

error: Content is protected !!