Friday, June 5, 2026
Homeಕರಾವಳಿಪುತ್ತೂರು:ಚರ್ಚ್‌ಗೆ ಹೋಗುತ್ತಿದ್ದ ಇಬ್ಬರಿಗೆ ಹೆಜ್ಜೇನು ಕಡಿತ: ಆಸ್ಪತ್ರೆಗೆ ದಾಖಲು

ಪುತ್ತೂರು:ಚರ್ಚ್‌ಗೆ ಹೋಗುತ್ತಿದ್ದ ಇಬ್ಬರಿಗೆ ಹೆಜ್ಜೇನು ಕಡಿತ: ಆಸ್ಪತ್ರೆಗೆ ದಾಖಲು

- Advertisement -
- Advertisement -

ಪುತ್ತೂರು: ಚರ್ಚ್‌ಗೆ ಹೋಗುತ್ತಿದ್ದಾಗ ಇಬ್ಬರಿಗೆ ಹೆಜ್ಜೇನು ಕಡಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪುತ್ತೂರಿನ ಆನೆಮಜಲಿನಲ್ಲಿ ನಡೆದಿದೆ.

ಆನೆಮಜಲಿನ ನಿವಾಸಿ ಸಿಡಿಪಿಒ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಕಲಚೇತನ ರೋಶನ್ ಗೊನ್ಸಾಲಿಸ್ ಮತ್ತು ರಿಚರ್ಡ್ ಎಂಬವರು ಅಸ್ವಸ್ಥತಗೊಂಡವರು.

ಮುಂಜಾನೆ ಚರ್ಚ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹೆಜ್ಜೇನು ಇಬ್ಬರ ಮೇಲೆ ದಾಳಿ ಮಾಡಿದೆ. ಬಳಿಕ ಅಸ್ವಸ್ಥಗೊಂಡು ಬಿದ್ದಿದ್ದ ಅವರನ್ನು, ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಓರ್ವನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!