Saturday, June 6, 2026
Homeತಾಜಾ ಸುದ್ದಿಚರ್ಮ ಗಂಟು ರೋಗದಿಂದ ಜಾನುವಾರು ಮೃತಪಟ್ಟರೆ ಸರ್ಕಾರದಿಂದ ಪರಿಹಾರ ನಿಗದಿಪಡಿಸಿ ಆದೇಶ

ಚರ್ಮ ಗಂಟು ರೋಗದಿಂದ ಜಾನುವಾರು ಮೃತಪಟ್ಟರೆ ಸರ್ಕಾರದಿಂದ ಪರಿಹಾರ ನಿಗದಿಪಡಿಸಿ ಆದೇಶ

- Advertisement -
- Advertisement -

ಬೆಂಗಳೂರು: ಚರ್ಮ ಗಂಟು ರೋಗದಿಂದ ಮರಣಿಸಿದ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪರಿಹಾರದ ಮೊತ್ತ ನಿಗದಿ ಪಡಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಬಿದ್ದಿದ್ದು, ಕರು ಮೃತಪಟ್ಟರೆ 5000 ರೂಪಾಯಿ,
ಹಸು ಮೃತಪಟ್ಟರೆ 20,000 ರೂಪಾಯಿ ಮತ್ತು
ಎತ್ತು ಮೃತಪಟ್ಟರೆ 30,000 ರೂಪಾಯಿ ದೊರೆಯಲಿದೆ.

ಪರಿಹಾರ ಪಡೆಯಲು ಜಾನುವಾರು ಮರಣಿಸಿದಲ್ಲಿ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಮರಣ ದೃಢೀಕರಣ ಪತ್ರ ಒದಗಿಸಬೇಕಾಗಿದೆ. ಒಂದು ವೇಳೆ ಮೃತಪಟ್ಟ ಜಾನುವಾರು ವಿಮೆಗೆ ಒಳಪಟ್ಟಿದ್ದಲ್ಲಿ ಪರಿಹಾರ ಲಭ್ಯವಾಗುವುದಿಲ್ಲ.

ಚರ್ಮ ಗಂಟು ರೋಗಕ್ಕೆ ಪರಿಹಾರ ರಾಜ್ಯ ಸರ್ಕಾರದಿಂದ ಕೊಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಎರಡು ದಿನಗಳ ಹಿಂದೆ ಹಾವೇರಿಯಲ್ಲಿ ಘೋಷಣೆ ಮಾಡಿದ್ದರು.‌

- Advertisement -

Latest News

error: Content is protected !!