Thursday, July 16, 2026
Homeತಾಜಾ ಸುದ್ದಿಗಾಂಧಿ ಜಯಂತಿಯಂದು ಖಾದಿ ಮಳಿಗೆಗೆ ತೆರಳಿ ಬಟ್ಟೆ ಖರೀದಿಸಿದ ಸಿಎಂ ಬೊಮ್ಮಾಯಿ‌

ಗಾಂಧಿ ಜಯಂತಿಯಂದು ಖಾದಿ ಮಳಿಗೆಗೆ ತೆರಳಿ ಬಟ್ಟೆ ಖರೀದಿಸಿದ ಸಿಎಂ ಬೊಮ್ಮಾಯಿ‌

- Advertisement -
- Advertisement -

ಬೆಂಗಳೂರು: ಮಹಾತ್ಮಾ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಖಾದಿ ಮಳಿಗೆಗೆ ತೆರಳಿ ಖಾದಿ ಬಟ್ಟೆ ಖರೀದಿಸಿದರು.

ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಳಿಗೆಗೆ ಭೇಟಿ ನೀಡಿದ ಸಿಎಂ ಸುಮಾರು 3000 ರೂಪಾಯಿ ಬೆಲೆಯ ಖಾದಿ ಬಟ್ಟೆ ಖರೀದಿಸಿದರು.

ಈ ವೇಳೆ ಸಚಿವರಾದ ಎಂಟಿಬಿ ನಾಗರಾಜು, ಗೋವಿಂದ ಕಾರಜೋಳ, ಶಾಸಕ ಪಿ. ರಾಜೀವ್ ಕೂಡಾ ಸಿಎಂ ಬೊಮ್ಮಾಯಿ‌ ಜೊತೆಗಿದ್ದರು.

ಗಾಂಧಿ ಜಯಂತಿಯಂದು ಎಲ್ಲಾ ಸಚಿವರು ಖಾದಿ ಮಳಿಗೆಗೆ ತೆರಳಿ ಖಾದಿ ಬಟ್ಟೆ ಖರೀದಿಸುವಂತೆ ಸಣ್ಣ ಕೈಗಾರಿಕಾ ಇಲಾಖೆ ಸಚಿವ ಎಂಟಿಬಿ ನಾಗರಾಜು ಎಲ್ಲಾ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

- Advertisement -

Latest News

error: Content is protected !!