Thursday, June 4, 2026
Homeಕರಾವಳಿಸುಳ್ಯ: ಇಲಿ ಪಾಷಾಣ ಸೇವಿಸಿದ್ದ13 ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಸಾವು

ಸುಳ್ಯ: ಇಲಿ ಪಾಷಾಣ ಸೇವಿಸಿದ್ದ13 ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಸಾವು

- Advertisement -
- Advertisement -

ಸುಳ್ಯ: ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆಯ 13 ವರ್ಷದ ಬಾಲಕಿ ಮಂಗಳೂರಿನ ಆಸ್ಪತ್ರೆಯಲಿ ಮೃತಪಟ್ಟ ಘಟನೆ ನಡೆದಿದೆ.

ಮೃತ ಬಾಲಕಿಯನ್ನು ದೇವಚಳ್ಳ ಗ್ರಾಮದ ಮಾವಿನಕಟ್ಟೆ ಈಶ್ವರ ಎಂಬವರ ಪುತ್ರಿ ಯಶಸ್ವಿನಿ (13 ) ಎಂದು ಗುರುತಿಸಲಾಗಿದೆ.

ಮೃತ ಬಾಲಕಿ ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ಬಾಲಕಿ ವಾರದ ಹಿಂದೆ ಅಂಗಡಿಯೊಂದರಿಂದ ಇಲಿ ಪಾಷಾಣ ಖರೀದಿಸಿ, ಅದನ್ನು ಸೇವಿಸಿ ಶಾಲೆಗೆ ತೆರಳಿದ್ದಳೆನ್ನಲಾಗಿದೆ.

ಶಾಲೆಯಲ್ಲಿ ಈಕೆ ಅಸ್ವಸ್ಥಗೊಂಡಾಗ ಶಿಕ್ಷಕರು ಉಪಚರಿಸಿ ಮನೆಗೆ ಕಳುಹಿಸಿದ್ದರು. ಬಳಿಕ ಆಕೆ ಅಸ್ವಸ್ಥತೆ ಉಲ್ಬಣಗೊಂಡಾಗ ಮನೆಯವರು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಾಲಕಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಳೆಂದು ತಿಳಿದು ಬಂದಿದೆ.

ಮೃತ ವಿದ್ಯಾರ್ಥಿನಿ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾಳೆ.

- Advertisement -

Latest News

error: Content is protected !!