Tuesday, May 7, 2024
Homeತಾಜಾ ಸುದ್ದಿಮಂಗಳೂರು: ಥರ್ಮಕೋಲ್ ಸಹಿತ ಒಂದು ಲೋಡ್‌ ಕಸವನ್ನು ಸಮುದ್ರಕ್ಕೆ ಸುರಿದ ಲಾರಿ ವಶಕ್ಕೆ

ಮಂಗಳೂರು: ಥರ್ಮಕೋಲ್ ಸಹಿತ ಒಂದು ಲೋಡ್‌ ಕಸವನ್ನು ಸಮುದ್ರಕ್ಕೆ ಸುರಿದ ಲಾರಿ ವಶಕ್ಕೆ

spot_img
- Advertisement -
- Advertisement -

ಮಂಗಳೂರು: ಥರ್ಮಕೋಲ್ ಸಹಿತ ಒಂದು ಲೋಡ್‌ ಕಸವನ್ನು ಸಮುದ್ರಕ್ಕೆ ಸುರಿದಿರುವಂತಹ ಘಟನೆ ಸಂಬಂಧಪಟ್ಟಂತೆ ಲಾರಿಯನ್ನು ಪತ್ತೆಹಚ್ಚಿ ಉಳ್ಳಾಲ ಪೊಲೀಸರು ವಶಕ್ಕೆ ಪಡೆ ಪಡೆದಿದ್ದು, ನಂತರ ಉಳ್ಳಾಲ ನಗರಸಭೆಗೆ ಒಪ್ಪಿಸಿದ್ದಾರೆ.

ಉಳ್ಳಾಲ ನಗರದಸಭೆ ವ್ಯಾಪ್ತಿಯಲ್ಲಿ 3 ದಿನಗಳ ಹಿಂದೆ ಲಾರಿಯೊಂದು ಸಮುದ್ರಕ್ಕೆ ಕಸಗಳನ್ನು ಸುರಿದಿದ್ದರು. ಈ ಘಟನೆಯಲ್ಲಿ ಅಲ್ಲಿದ್ದ ಸ್ಥಳೀಯರು ಚಿತ್ರೀಕರಿಸಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಉಳ್ಳಾಲ ನಗರಸಭೆಯ ಪೌರಾಯುಕ್ತರು ಲಾರಿಯನ್ನು ವಶಕ್ಕೆ ಪಡೆಯುವಂತೆ ಸೂಚಿಸಿದ್ದರು.

ಅದರಂತೆ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಪುರಸಭೆಗೆ ಹಸ್ತಾಂತರಿಸಿದ್ದಾರೆ. ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯುವವರ ವಿರುದ್ದ ಪುರಸಭೆಗೆ 1 ಲಕ್ಷದವರೆಗೆ ದಂಡ ವಿಧಿಸುವ ಅಧಿಕಾರವಿದೆ.

- Advertisement -
spot_img

Latest News

error: Content is protected !!