ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ವಿಶ್ವಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ಅನೇಕ ಸಮಸ್ಯೆಗಳು ಎದುರಾಗಿರುವಾಗಲೇ ಜನಸಂಖ್ಯೆ ಮತ್ತಷ್ಟು ಸ್ಫೋಟದ ಸಾಧ್ಯತೆಯೂ ಎದುರಾಗಿದೆ.
ಲಾಕ್‍ಡೌನ್‍ನಿಂದಾಗಿ ವಿಶ್ವದಲ್ಲಿ 70 ಲಕ್ಷ ಮಹಿಳೆಯರು ಗರ್ಭಿಣಿಯರಾಗಲಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತೆ..? ಗರ್ಭನಿರೋಧಕಗಳ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಅವುಗಳು ಜನರಿಗೆ ಲಭಿಸದೇ ಇರುವುದು..!
ವಿಶ್ವಸಂಸ್ಥೆಯ ಅಧ್ಯಯನವೊಂದರ ಪ್ರಕಾರ ಮುಂಬರುವ ತಿಂಗಳಲ್ಲಿ ಕಡಿಮೆ ಮತ್ತು ಮಧ್ಯಮ ಆದಾಯ ಇರುವ ದೇಶಗಳ ಸುಮಾರು ಏಳು ದಶಲಕ್ಷ ಸ್ತ್ರೀಯರು ಗರ್ಭವತಿಯಾಗಲಿದ್ದಾರೆ. ಮುಂದುವರಿದಿರುವ ಲಾಕ್‍ಡೌನ್‍ನಿಂದ ಗರ್ಭನಿರೋಧಕಗಳು ಸಕಾಲದಲ್ಲಿ ಜನರಿಗೆ ತಲುಪುತ್ತಿಲ್ಲ.
ಇದರಿಂದಾಗಿ ಸುಮಾರು 70 ಲಕ್ಷ ಮಹಿಳೆಯರು ಅಪೇಕ್ಷೆರಹಿತ ಗರ್ಭಿಣಿಯರಾಗಲಿದ್ದಾರೆ ಎಂದು ವಿಶ್ವಸಂಸ್ಥೆ ಜನಸಂಖ್ಯಾ ನಿದಿ (ಯುಎನ್‍ಎಫ್‍ಪಿಎ) ಬಿಡುಗಡೆ ಮಾಡಿರುವ ದತ್ತಾಂಶ ಮಾಹಿತಿಯಿಂದ ತಿಳಿದುಬಂದಿದೆ.
ಲಾಕ್‍ಡೌನ್ ಅವಧಿಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಗರ್ಭನಿರೋಧಕಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಕಡಿಮೆ ಮತ್ತು ಮಧ್ಯಮ ವರಮಾನದ ದೇಶಗಳಲ್ಲಿ 47 ದಶಲಕ್ಷ ಮಹಿಳೆಯರು (4 ಕೋಟಿ. 70 ಲಕ್ಷ ಮಹಿಳೆಯರು) ಅಧುನಿಕ ಗರ್ಭನಿರೋಧಕಗಳನ್ನು ಬಳಸಲು ಸಾಧ್ಯವಾಗಿಲ್ಲ.
ಇದರಿಂದಾಗಿ ಇವರಲ್ಲಿ ಏಳು ಲಕ್ಷ ವನಿತೆಯರು ಇಚ್ಛೆ ಇಲ್ಲದಿದ್ದರೂ ಗರ್ಭಿಣಿಯರಾಗಲಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
ಲಾಕ್‍ಡೌನ್ ಬಿಕ್ಕಟ್ಟಿನಿಂದಾಗಿ ಮಹಿಳೆಯರು ಕುಟುಂಬ ಯೋಜನೆ ಪಾಲಿಸಲು ಸಾಧ್ಯವಾಗುತ್ತಿಲ್ಲ ಅವು ಅನಗತ್ಯವಾದ ಒಲ್ಲದ ಗರ್ಭಧಾರಣೆಗೆ ಒಳಗಾಗುತ್ತಿದ್ದಾರೆ. ಇದಲ್ಲದೇ ಲಕ್ಷಾಂತರ ಮಹಿಳೆಯರು ಲಿಂಗ ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಗೃಹ ಶೋಷಣೆ, ಲೈಂಗಿಕ ಹಿಂಸಾಚಾರ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಯುಎನ್‍ಎಫ್‍ಪಿಎ ಕಾರ್ಯಕಾರಿ ನಿರ್ದೇಶಕಿ ನಟಾಲಿಯಾ ಕನೇಮ್ ತಿಳಿಸಿದ್ದಾರೆ.