Friday, June 5, 2026
Homeಅಪರಾಧಖಾರ ಪುಡಿ ಎರಚಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ  ₹5 ಲಕ್ಷ ಹಣ ಕಳ್ಳತನ

ಖಾರ ಪುಡಿ ಎರಚಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ  ₹5 ಲಕ್ಷ ಹಣ ಕಳ್ಳತನ

- Advertisement -
- Advertisement -

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳಿಂದ ವಾರದ ಕಂತಿನಲ್ಲಿ ಸಂಗ್ರಹಿಸಲಾಗಿದ್ದ ₹5 ಲಕ್ಷ ಹಣವನ್ನು ಕಳ್ಳರು ಹಾಡಹಗಲೇ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರದಂದು ಮುಳಬಾಗಿಲು ನಗರದ ಶಾಮೀರ್ ಮೊಹಲ್ಲಾದ ಸಂಘದ ಕಚೇರಿಯಲ್ಲಿ ನಡೆದಿದೆ.

ಸಂಘದ ಅಧಿಕಾರಿ ಶಶಿಕಲಾ ಅವರು ಸಂಗ್ರಹಿಸಿ, ಮುಖ್ಯ ಕಚೇರಿಗೆ ಸಾಗಿಸಲು ತಯಾರು ಮಾಡಿಕೊಳ್ಳುತ್ತಿದ್ದು, ಆ ಸಂದರ್ಭ ವೇಳೆ ಇಬ್ಬರು ಅಪರಿಚಿತರು ಕಚೇರಿಗೆ ನುಗ್ಗಿ ಶಶಿಕಲಾ ಅವರ ಕಣ್ಣುಗಳಿಗೆ ಖಾರದ ಪುಡಿ ಎರಚಿ, ಚಾಕು ತೋರಿಸಿ ₹5 ಲಕ್ಷ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಎಎಸ್‌ಪಿ ಮನಿಷಾ ಮನೋಹಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!