Wednesday, June 24, 2026
Homeಕರಾವಳಿಮಂಗಳೂರುಪುತ್ತೂರು : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಬಂಧನ

ಪುತ್ತೂರು : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಬಂಧನ

- Advertisement -
- Advertisement -

ಪುತ್ತೂರು : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ದೂರುದಾರರ ಮಗ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದು, ಕಾಲೇಜಿಗೆ ರಜೆಯಿದ್ದುದರಿಂದ ದಿನಾಂಕ:18-03-2026 ಪುತ್ತೂರು ತಾಲೂಕಿನ ನೆಟ್ಟಣಿಗೆಮುಡ್ನೂರು ಗ್ರಾಮದ ನಿವಾಸಿ ಅಶ್ರಫ್ ಎಂಬಾತನ ಜ್ಯೂಸ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದನು. ದಿನಾಂಕ:26-03-2026 ರಂದು ಮಧ್ಯಾಹ್ನ 2 ಗಂಟೆಗೆ ದೂರುದಾರ ಮಗ ಅಶ್ರಫ್ ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಸಮಯ ಅಶ್ರಫ್ ನು ಅಂಗಡಿ ಪಕ್ಕದಲ್ಲಿರುವ ತನ್ನ ಮನೆಯಲ್ಲಿ ಪರ್ಸ್ ಇದೆ ತೆಗೆದುಕೊಂಡು ಬಾ ಎಂದು ತಿಳಿಸಿದ್ದಾನೆ.  ಆತನು ಮನೆಗೆ ಪರ್ಸ್‌ ತರಲು ಹೋದಾಗ ಅಶ್ರಫ್ ನು ಒಟ್ಟಿಗೆ ಹಿಂದಿನಿಂದ ಹೋಗಿ ಮನೆಯ ಬಾಗಿಲು ಹಾಕಿ ಆತನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಅಲ್ಲದೇ ನಾನು ಹಣ ಕೊಡುತ್ತೇನೆ ನಾನು ಹೇಳಿದಂತೆ ಕೇಳಬೇಕು ಆಮಿಷ ಒಡಿದ್ದು, ಈ ವಿಚಾರ ಯಾರಲಾದರೂ ಹೇಳಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ  ಹಾಕಿದ್ದಾನೆ ಎಂದು ಏ.4 ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಫೋಕ್ಸೋ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಸಂತ್ರಸ್ತ ಬಾಲಕ ಕಾಸರಗೋಡು ಚೈಲ್‌ಡ್ ಲೈನ್ ಗೆ ದೂರು ನೀಡಿದ್ದು. ಆ ಬಳಿಕ ಆತನ ತಂದೆಗೆ ತಿಳಿದಿದ್ದು, ಕಾನೂನಿನ ಅರಿವು ಇಲ್ಲದೇ ಇರುವುದರಿಂದ ತಡವಾಗಿ ದೂರು ನೀಡಿದ್ದಾರೆ.  ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪುತ್ತೂರು ತಾಲೂಕಿನ ನೆಟ್ಟಣಿಗೆಮುಡ್ನೂರು ಗ್ರಾಮದ ಗಾಳಿಮುಖ ನಿವಾಸಿ ಜ್ಯೂಸ್ ಅಂಗಡಿ ಮಾಲೀಕ ಹಲವು ಪ್ರಕರಣಗಳ ಆರೋಪಿ ಹಾಗೂ ರೌಡಿಶೀಟರ್ ಆಗಿರುವ ಅಶ್ರಫ್ ಏ.4 ರಂದು ಸಂಜೆ ಬಂಧಿಸಿ ಪುತ್ತೂರು ನ್ಯಾಯಲಯಕ್ಕೆ ಹಾಜರುಪಡಿಸಿದ್ದು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!