Thursday, May 2, 2024
Homeಇತರಎನ್ಎನ್-32 ದುರಂತಕ್ಕೆ ನಾಲ್ಕು ವರ್ಷ- ಭರವಸೆಯಾಗಿಯೇ ಉಳಿದಿದೆ ಏಕನಾಥ್ ಶೆಟ್ಟಿ ಕುಟುಂಬಕ್ಕೆ ಸರ್ಕಾರ ನೀಡಿದ ಭರವಸೆ

ಎನ್ಎನ್-32 ದುರಂತಕ್ಕೆ ನಾಲ್ಕು ವರ್ಷ- ಭರವಸೆಯಾಗಿಯೇ ಉಳಿದಿದೆ ಏಕನಾಥ್ ಶೆಟ್ಟಿ ಕುಟುಂಬಕ್ಕೆ ಸರ್ಕಾರ ನೀಡಿದ ಭರವಸೆ

spot_img
- Advertisement -
- Advertisement -

ಬೆಳ್ತಂಗಡಿ: ಚೆನೈ ತಾಂಬರಂ ವಾಯುನೆಲೆಯಿಂದ ಅಂಡಮಾನ್ ನಿಕೋಬರ್ ನ ಪೋರ್ಟ್‌ ಬ್ಲೇರ್ ಗೆ ಜು.22 ರಂದು ಪ್ರಯಾಣಿಸುತ್ತಿದ್ದ ಎಎನ್- 32 ಯುದ್ಧ ವಿಮಾನ ಬಂಗಾಳಕೊಲ್ಲಿ‌ ಸಮುದ್ರದಲ್ಲಿ ಸಂಪರ್ಕ ಕಡಿತಗೊಂಡು ಇಂದಿಗೆ ಬರೋಬ್ಬರಿ ನಾಲ್ಕು ವರ್ಷ.ಈ ವಿಮಾನದಲ್ಲಿ ಸೇವೆಯ ನಿಮಿತ್ತ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಧ ಏಕನಾಥ ಶೆಟ್ಟಿ‌ ಸೇರಿ 29 ಜನ ಭಾರತೀಯ ಸೈನಿಕರು ಇಂದಿಗೂ ಕಣ್ಮರೆಯಾಗಿಯೇ ಉಳಿದಿದ್ದಾರೆ. ಇತ್ತ ಏಕನಾಥ್ ಶೆಟ್ಟಿ ಬರುವಿಕೆಗಾಗಿ ಅವರ ಮನೆಯವರು ಕಾಯುತ್ತಲೇ ಇದ್ದಾರೆ.

ಅಂದ್ಹಾಗೆ ವಿಮಾನ ಇದುವರೆಗೂ ಪತ್ತೆಯಾಗದೇ ಇರೋದು ಭಾರತೀಯ ವಾಯುಪಡೆಯ ಇತಿಹಾಸದಲ್ಲೊಂದು ಕರಾಳ ನೆನಪು. ವಿಮಾನ ನಾಪತ್ತೆಯಾದಾಗ ಪತ್ತೆ ಹಚ್ಚಲು ಕೇಂದ್ರ ಸರಕಾರ ಮತ್ತು ಮಿಲಿಟರಿ ತಜ್ಞರು ಸತತ ಮೂರು ತಿಂಗಳು  ನೌಕಾಸೇನೆಯ 12 ನೌಕೆಗಳ ಮೂಲಕ ಪ್ರಯತ್ನಿಸಿದ್ದರು. ಆದರೆ ಪ್ರಯೋಜನವಾಗಿಲ್ಲ.  ಇದೇ ವಿಮಾನದಲ್ಲಿ ಗುರುವಾಯನಕೆರೆ ವೀರ ಸೇನಾನಿ ಏಕನಾಥ ಶೆಟ್ಟಿಯವರು  ಸೇವಾ ಪಯಣ ಆರಂಭಿಸಿದ್ದರು.

ಅಂದಿನಿಂದ ಇಂದಿನವರೆಗೂ ಏಕನಾಥ ಶೆಟ್ಟಿ ನೆನಪಿನಲ್ಲೇ ಪತ್ನಿ ಜಯಂತಿ ಶೆಟ್ಟಿ, ಮಗ ಅಕ್ಷಯ್ ಶೆಟ್ಟಿ, ಪುತ್ರಿ ಅಶಿತಾ ಶೆಟ್ಟಿ ದಿನ ದೂಡುತ್ತಿದ್ದಾರೆ, ಇನ್ನು ಏಕನಾಥ್ ಶೆಟ್ಟಿ ಅವರ ಮಗಳು ಅಶಿತಾ ಶೆಟ್ಟಿ ಎಂಎಚ್‌ಆರ್ ಡಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಮಗ ಎಂಜಿನಿಯರಿಂಗ್ ಓದುತ್ತಿದ್ದಾರೆ. ಆದರೆ ಘಟನೆ ನಡೆದ ಸಮಯದಲ್ಲಿ ಸರ್ಕಾರಿ ಉದ್ಯೋಗ ಹೀಗೆ ಹತ್ತಾರು ಭರವಸೆ ನೀಡಿದ್ದ ಮಂತ್ರಿಗಳು,ಅಧಿಕಾರಿಗಳು ಭರವಸೆಗಳನ್ನು ಭರವಸೆಗಳಾಗಿಯೇ ಉಳಿಸಿದ್ದಾರೆ ಅಂತಾ ಬೇಸರದಲ್ಲಿದ್ದಾರೆ ಏಕನಾಥ್ ಶೆಟ್ಟಿ ಪತ್ನಿ ಜಯಂತಿ ಶೆಟ್ಟಿ.

- Advertisement -
spot_img

Latest News

error: Content is protected !!