Thursday, June 4, 2026
Homeಕರಾವಳಿನಂದಗೋಕುಲ ಗೋಶಾಲೆಗೆ ಪದ್ಮುಂಜ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಅನುದಾನ ವಿತರಣೆ

ನಂದಗೋಕುಲ ಗೋಶಾಲೆಗೆ ಪದ್ಮುಂಜ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಅನುದಾನ ವಿತರಣೆ

- Advertisement -
- Advertisement -

ಬೆಳ್ತಂಗಡಿ: ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ನಂದಗೋಕುಲ ಗೋಶಾಲೆಗೆ ಪದ್ಮುಂಜ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಹತ್ತು ಸಾವಿರ ರುಪಾಯಿಗಳ ಅನುದಾನವನ್ನು ಗೋಶಾಲೆಯ ಕಾರ್ಯದರ್ಶಿಗಳು,ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷರು ಹಿರಿಯ ನ್ಯಾಯವಾದಿಗಳಾದ ಸುಬ್ರಹ್ಮಣ್ಯ ಕುಮಾರ್ ಅಗರ್ತರಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಪದ್ಮುಂಜ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ, ನಿರ್ದೇಶಕರಾದ ನಾರಾಯಣ ಗೌಡ, ರಾಜೀವ್ ರೈ, ಉದಯ್ ಕುಮಾರ್ ಬಿ.ಕೆ, ರಾಮಣ್ಣ ಸಾಲಿಯಾನ್, ಕೇಶವ್ ಪೂಜಾರಿ, ದಿನೇಶ್ ನಾಯ್ಕ್ ಮೈಪಾಜೆ, ಪಿಜಿನ ಮೊಗೇರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ಸಾಲಿಯಾನ್, ಮುಖ್ಯಕಾರ್ಯನಿವಾಹಣಾಧಿಕಾರಿ ಉಮೇಶ್ ಪಡ್ಡಿಲ್ಲಾಯ ಮತ್ತಿತರರು ಉಪಸ್ಥಿರಿದ್ದರು.

- Advertisement -

Latest News

error: Content is protected !!