Friday, June 26, 2026
Homeತಾಜಾ ಸುದ್ದಿಕುಡಿದು ಬಂದ ಅಪ್ಪನ ಏಟಿನಿಂದ ತಪ್ಪಿಸಿಕೊಳ್ಳಲು ರಬ್ಬರ್ ತೋಟದಲ್ಲಿ ಅಡಗಿ ಕುಳಿತ ಬಾಲಕಿ: ಹಾವು ಕಚ್ಚಿ...

ಕುಡಿದು ಬಂದ ಅಪ್ಪನ ಏಟಿನಿಂದ ತಪ್ಪಿಸಿಕೊಳ್ಳಲು ರಬ್ಬರ್ ತೋಟದಲ್ಲಿ ಅಡಗಿ ಕುಳಿತ ಬಾಲಕಿ: ಹಾವು ಕಚ್ಚಿ ಸಾವು

- Advertisement -
- Advertisement -

ತಮಿಳುನಾಡು ಪ್ರತಿದಿನ ಕುಡಿದು ಬಂದು ಹೊಡೆಯುತ್ತಿದ್ದ ಅಪ್ಪನ ಏಟಿನಿಂದ ತಪ್ಪಿಸಿಕೊಳ್ಳಲು ರಬ್ಬರ್ ತೋಟದಲ್ಲಿ ಅಡಗಿ ಕುಳಿತ ಬಾಲಕಿಯೊಬ್ಬಳು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ನಾಲ್ಕು ವರ್ಷದ ಸುಶ್ವಿಕಾ ಮೋಲ್ ಮೃತ ದುರ್ದೈವಿ.

ಪ್ರತಿದಿನ ಕಂಠಪೂರ್ತಿ ಕುಡಿದು ಬರುತ್ತಿದ್ದ ಸುರೇಂದ್ರನ್ ತನ್ನ ಪತ್ನಿ ಹಾಗೂ ಮೂವರಿಗೆ ಹೊಡೆಯುತ್ತಿದ್ದ. ಹಾಗಾಗಿ ಆತ ಬರುತ್ತಿದ್ದ ತಾಯಿ ಹಾಗೂ ಮಕ್ಕಳು ರಬ್ಬರ್ ತೋಟದಲ್ಲಿ ಅಡಗಿ ಕೂರುತ್ತಿದ್ದರು. ಅದೇ ರೀತಿಯೂ ನಿನ್ನೆಯೂ ಆತನಿಂದ ತಪ್ಪಿಸಿಕೊಳ್ಳಲು ತಾಯಿ ಮಕ್ಕಳು ರಬ್ಬರ್ ತೋಟಕ್ಕೆ ಹೋಗಿದ್ದಾರೆ. ಈ ವೇಳೆ ಹಾವು ಕಚ್ಚಿ ಮುಗ್ಧ ಕಂದಮ್ಮ ಸಾವನ್ನಪ್ಪಿದೆ.ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಸುರೇಂದ್ರನ್ ನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!