Saturday, May 4, 2024
Homeಕರಾವಳಿನಮಾಜ್ ಬಳಿಕ ದ್ವೇಷದ ಭಾಷಣ ಮಾಡಬೇಡಿ ಎಂದ ಇನ್ಸ್ ಪೆಕ್ಟರ್ ರಾತ್ರೋರಾತ್ರಿ ಎತ್ತಂಗಡಿ

ನಮಾಜ್ ಬಳಿಕ ದ್ವೇಷದ ಭಾಷಣ ಮಾಡಬೇಡಿ ಎಂದ ಇನ್ಸ್ ಪೆಕ್ಟರ್ ರಾತ್ರೋರಾತ್ರಿ ಎತ್ತಂಗಡಿ

spot_img
- Advertisement -
- Advertisement -

ಕೇರಳ:  ನಮಾಜ್​ ನಂತರ ದ್ವೇಷ ಭಾಷಣ ಮಾಡದಂತೆ ಹೇಳಿದ ಪೊಲೀಸ್​ ಇನ್ಸ್​ಪೆಕ್ಟರ್​ ಒಬ್ಬರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.

ಶುಕ್ರವಾರದ ನಮಾಜ್ ನಂತರ ಮಸೀದಿಯಲ್ಲಿ ದ್ವೇಷ ಭಾಷಣ ಮಾಡದಂತೆ ಮಸೀದಿ ಕಮಿಟಿಗೆ ನೋಟಿಸ್​ ನೀಡಿದ್ದ ಮಯ್ಯಿಲ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಗಿದ್ದ ಬಿಜು ಪ್ರಕಾಶ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಕೋಮು ಸೌಹಾರ್ದ ಹಾಳು ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನೋಟಿಸ್​ನಲ್ಲಿ ಇನ್ಸ್​ಪೆಕ್ಟರ್​ ಎಚ್ಚರಿಸಿದ್ದರು.

ಈ ನೋಟಿಸ್​ ವಿರುದ್ಧ ಮುಸ್ಲಿಂನ ಕೆಲ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಸಮ್ಸಾಥಾ ಜಮಾಯುತ್​-ಉಲ್ ಉಲೇಮಾ ಸಂಘಟನೆ, ಮುಸ್ಲಿಂ ಲೀಗ್ ಹಾಗೂ ಎಸ್​ಡಿಪಿಐ ಸೇರಿದಂತೆ ಕೆಲವು ಸಂಘಟನೆಗಳು ನೋಟಿಸ್​ ಅನ್ನು ಖಂಡಿಸಿದ್ದವು. ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಲೀಗ್ ಆಗ್ರಹಿಸಿವೆ. ಸುನ್ನಿ ಮಹಲ್ ಫೆಡರೇಶನ್ ಈ ಬಗ್ಗೆ ತನಿಖೆಯಾಗಲಿ ಎಂದು ಹೇಳಿದೆ. ಪೊಲೀಸ್ ಅಧಿಕಾರಿ ತಮಗೆ ಅವಮಾನ ಮಾಡಿರುವುದಾಗಿ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ಅದೇ ಇನ್ನೊಂದೆಡೆ, ಇನ್ಸ್​ಪೆಕ್ಟರ್​ ಅವರನ್ನು ವರ್ಗ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಸರ್ಕಾರ, ‘ಸ್ಟೇಷನ್ ಹೌಸ್ ಆಫೀಸರ್ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ನೋಟಿಸ್ ಕಳುಹಿಸಿದ್ದಾರೆ. ಹಾಗಾಗಿ ಅವರಿಗೆ ವರ್ಗ ಮಾಡಿಲಾಗಿದೆ ಎಂದಿದೆ.

- Advertisement -
spot_img

Latest News

error: Content is protected !!