Saturday, June 6, 2026
Homeಕರಾವಳಿಪೊಲೀಸ್ ಠಾಣೆ ಮೆಟ್ಟಿಲೇರಿದ ಸುಳ್ಯದ ಖ್ಯಾತ ಜನಪ್ರತಿನಿಧಿಯೊಬ್ಬರ ಮಗಳು ವಿವಾಹ ಪ್ರಕರಣ:  ವಶೀಕರಣ ಮಾಡಿ ಯುವ...

ಪೊಲೀಸ್ ಠಾಣೆ ಮೆಟ್ಟಿಲೇರಿದ ಸುಳ್ಯದ ಖ್ಯಾತ ಜನಪ್ರತಿನಿಧಿಯೊಬ್ಬರ ಮಗಳು ವಿವಾಹ ಪ್ರಕರಣ:  ವಶೀಕರಣ ಮಾಡಿ ಯುವ ವೈದ್ಯೆಯನ್ನು ಮದುವೆಯಾಗಿದ್ದಾನೆ ಎಂದು ಯುವಕನ ವಿರುದ್ಧ ಕುಟುಂಬಸ್ಥರ ಆರೋಪ

- Advertisement -
- Advertisement -

ಸುಳ್ಯ: ಇಲ್ಲಿನ ಖ್ಯಾತ ಜನಪ್ರತಿನಿಧಿಯ ಪುತ್ರಿಯ ವಿವಾಹ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವೈದ್ಯೆಯಾಗಿರುವ ತಮ್ಮ ಮಗಳನ್ನು ವಶೀಕರಣ ಮಾಡಿ ಣಿ ಕೇರಳದ ಯುವಕ ವಿವಾಹವಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೇರಳದ ಕಾಂಞಂಗಾಡ್ ದೇವಸ್ಥಾನದಲ್ಲಿ ಅನ್ಯಜಾತಿಯ ಯುವಕ ವೈದ್ಯೆಯನ್ನು ವಿವಾಹವಾಗಿದ್ದು, ಮನೆಯವರು ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಹಾಗೂ ತಮ್ಮ ಮಗಳ ಮನವೊಲಿಸಿ ಕರೆತರುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಇನ್ನು ಈ ಬಗ್ಗೆ ಯುವತಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವುದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ‘ನಾನೇ ಆತನನ್ನು ಪ್ರೀತಿಸಿ ಮದುವೆಯಾಗಿದ್ದೇನೆ ನನ್ನನ್ನು ಯಾರೂ ವಶೀಕರಣ ಮಾಡಲಿಲ್ಲ, ಅಷ್ಟೇ ಅಲ್ಲದೇ ನಮಗೆ ಮದುವೆ ವಯೋಮಿತಿ ಆಗಿದ್ದು, ನಮ್ಮ ಜೀವನದ ಬಗ್ಗೆ ನಮಗೆ ಯೋಚಿಸುವ, ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ.ಪತಿಯ ಮನೆಯವರಾಗಲಿ, ಅಥವಾ ಆತನಾಗಲಿ ನನ್ನನ್ನು ವಶೀಕರಣ ಮಾಡಿಲ್ಲ, ನಾನು ನನ್ನ ಸ್ವ ಇಚ್ಛೆಯಿಂದ ಪ್ರೀತಿಸಿ ಮದುವೆಯಾಗಿದ್ದೇನೆ., ನಾವು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದೆವು ನನ್ನ ಮನೆಯಲ್ಲಿ ಒಪ್ಪದ ಕಾರಣ ನಾನು ಮನೆ ಬಿಟ್ಟು ಬಂದು, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ ಬಗ್ಗೆ ಅಪಪ್ರಚಾರ ಮಾಡಬೇಡಿ, ನಮ್ಮಷ್ಟಕ್ಕೆ ಬದುಕಲು ಬಿಡಿ ಎಂದು ಮನವಿ ಮಾಡಿದ್ದಾಳೆ,

- Advertisement -

Latest News

error: Content is protected !!