ಬಂಟ್ವಾಳ: ತಾಲೂಕಿನ ವಗ್ಗ ಸಮೀಪದ ಭೂಕೈಲಾಸ ಪ್ರತೀತೀಯ ಶ್ರೀ ಕಾರಿಂಜ ಕ್ಷೇತ್ರ ಎಂದಾಕ್ಷಣ ಅಲ್ಲಿನ ವಾನರ ಸೈನ್ಯ ಭಕ್ತರಿಗೆ ಅಚ್ಚುಮೆಚ್ಚು. ಕೊರೊನ ಮಹಾಮಾರಿಯ ಲಾಕ್ ಡೌನ್ ನ ಪರಿಣಾಮ ಜನರಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿ ಸಂಕುಲಕ್ಕೂ ತಟ್ಟಿದ್ದು, ಅದಕ್ಕೆ ನಿದರ್ಶನ ಕ್ಷೇತ್ರ ವಾನರ ಸೈನ್ಯ.
ಕ್ಷೇತ್ರಕ್ಕೆ ಅಗಮಿಸುತ್ತಿದ್ದ ಭಕ್ತರಿಂದ ಹಣ್ಣುಕಾಯಿ ಮತ್ತು ದೇವರ ನೈವೇದ್ಯವನ್ನು ಪಡೆದುಕೊಂಡು ಹಸಿವನ್ನು ನೀಗಿಸುತ್ತಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆ ಕ್ಷೇತ್ರ ಮುಚ್ಚಲ್ಪಟ್ಟಿದ್ದರಿಂದ ಆಗಮಿಸುವ ಭಕ್ತರು ಮತ್ತು ನೈವೇದ್ಯ ಇಲ್ಲದೆ ವಾನರ ಸೈನ್ಯ ತೊಂದರಕ್ಕೆ ಒಳಗಾಗಿದೆ. ಈ ಕುರಿತು ನಿಮ್ಮ ಮಹಾ ಎಕ್ಸ್ಪ್ರೆಸ್ ವಿಸ್ತೃತವಾದ ವರದಿ ಮಾಡಿತ್ತು.
ಈ ನಿಟ್ಟಿನಲ್ಲಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಸಂಸ್ಥೆಯ ವತಿಯಿಂದ 350 ಕೆ.ಜಿ ಅಕ್ಕಿ, ಬಾಳೆಹಣ್ಣು ಮತ್ತು ತರಕಾರಿಗಳನ್ನು ಸಮರ್ಪಣೆ ಮಾಡಲಾಯಿತು. ಈ ಸಮಯದಲ್ಲಿ ಕ್ಷೇತ್ರದ ಮ್ಯಾನೇಜರ್ ಸತೀಶ್ ಪ್ರಭು ಮತ್ತು ಸಂಸ್ಥೆಯ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.