ಅಮೆರಿಕಾ: ಮಹಿಳಾ ಪತ್ರಕರ್ತೆ ಮನೆಯಿಂದ ಟೆಲಿಕಾಸ್ಟ್ ಮಾಡುತ್ತಿದ್ದ ಶೋ ನಲ್ಲಿ ಆಕೆಯ ಪತಿ ಬಟ್ಟೆಯಿಲ್ಲದೇ ಕಾಣಿಸಿಕೊಂಡ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಕರೋನಾ ವೈರಸ್ ಲಾಕ್‌ಡೌನ್ ನಿಂದ ಹಲವರು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳೂ ವಾಟ್ಸಾಪ್ ಕಾಲ್, ಗ್ರೂಪ್ ಚಾಟ್ ಮುಂತಾದ ತಂತ್ರಜ್ಞಾನದ ಮೂಲಕ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಮೂಲದ ಟಿವಿ ಚಾನಲ್ ಒಂದರ ಪತ್ರಕರ್ತೆ ಮೆಲಿಂಡಾ ಮೇಝಾ ಕೂಡ ಮನೆಯಿಂದಲೇ ವರದಿ ನೀಡುತ್ತಿದ್ದರು.
ಐಸೋಲೇಷನ್ ಅವಧಿಯಲ್ಲಿ ಹೇರ್ ಡೈ ಮಾಡುವ ಪ್ರಾತ್ಯಕ್ಷಿಕೆಯನ್ನು ತಮ್ಮ ಮನೆಯ ಬಾತ್ ರೂಂ ನಲ್ಲಿ ವಿಡಿಯೋ ಮಾಡುತ್ತಿದ್ದರು. ಆಗ ಆಕೆಯ ಗಂಡ ಹಿನ್ನೆಲೆಯಲ್ಲಿ ಬಂದು ನಿಂತಿದ್ದ. ಆತ ಸಾಮಾನ್ಯರಂತೆ ಬಂದಿದ್ದರೆ ದೊಡ್ಡ ವಿಷಯವಾಗಿರಲಿಲ್ಲ. ಆತ ಬಟ್ಟೆಯನ್ನೇ ಹಾಕಿರಲಿಲ್ಲ.
ಮೆಲಿಂಡಾ ಹಾಗೂ ಟಿವಿ ಸ್ಟುಡಿಯೋದಲ್ಲಿ ಕುಳಿತ ಆಯಂಕರ್ ಅದನ್ನು ಗಮನಿಸಿಲ್ಲ. ಕಾರ್ಯಕ್ರಮ ಟೆಲಿಕಾಸ್ಟ್ ಆಗಿಬಿಟ್ಟಿದೆ. ಆದರೆ, ಕೆಲವೇ ಕ್ಷಣದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆಯಿಂದ ಕೆಲಸ ಮಾಡುವುದು ಸುಲಭದ ವಿಷಯವಲ್ಲ. ಅದಕ್ಕೆ ವಿಶೇಷ ಏಕಾಗ್ರತೆ ಬೇಕಾಗುತ್ತದೆ. ಕೋ ಆರ್ಡಿನೇಷನ್, ಮನೆಯವರ ಸಹಕಾರವೂ ಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅಧ್ವಾನವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.