- Advertisement -
- Advertisement -
ಕಲ್ಲಡ್ಕ: ವಿಶ್ವಾದ್ಯಂತ ಪಸರಿಸಿದ ಕೊರೋನಾ ವೈರಸ್ ಅನ್ನು ತಡೆಯುವ ಉದ್ದೇಶದಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರಧಾನ ಮೋದಿ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಮಾಜದಲ್ಲಿ ಯಾರಿಗೂ ಸಮಸ್ಯೆಯಾಗಬಾರದೆಂಬ ದೃಷ್ಠಿಯಿಂದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ನಿರ್ದೇಶನದಂತೆ ಶ್ರೀ ರಾಮ ವಿದ್ಯಾ ಕೇಂದ್ರದ ವತಿಯಿಂದ ಕಲ್ಲಡ್ಕದ ಸುತ್ತಮುತ್ತಲಿನ 20 ಗ್ರಾಮದ 1121 ಕುಟುಂಬಗಳಿಗೆ ಅಕ್ಕಿ, ಬೇಳೆ ಹಾಗೂ ಇತರ ಪದಾರ್ಥಗಳನ್ನು ವಿತರಿಸಲಾಯಿತು.
ಅಲ್ಲದೇ, ಅವರಿಗೆಲ್ಲ ಧೈರ್ಯ ತುಂಬಿ ಸಾಮಾಜಿಕ ಅಂತರ ಕಾಯ್ದುಕೊಂಡು ಅರೋಗ್ಯ ಕಾಪಾಡಿಕೊಳ್ಳಲು ಸೂಚಿಸಿದರು.
- Advertisement -