Friday, June 5, 2026
Homeತಾಜಾ ಸುದ್ದಿಹೃದಯಾಘಾತದಿಂದ ಮೂರನೇ ತರಗತಿ ವಿದ್ಯಾರ್ಥಿ ಸಾವು

ಹೃದಯಾಘಾತದಿಂದ ಮೂರನೇ ತರಗತಿ ವಿದ್ಯಾರ್ಥಿ ಸಾವು

- Advertisement -
- Advertisement -

ಹೈದರಾಬಾದ್;  ಹೃದಯಾಘಾತದಿಂದ ಮೂರನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಬೊಯ್ನಪಲ್ಲಿ ಮಂಡಲದ ವೆಂಕಟರಾವ್ಪಲ್ಲಿ ಗ್ರಾಮದಲ್ಲಿ ನಡೆದಿದೆ‌.

ಕೌಶಿಕ್(9)ಮೃತ ವಿದ್ಯಾರ್ಥಿ. ಈತ ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.ದೀಪಾವಳಿ ಸಂಭ್ರಮದಲ್ಲಿದ್ದ ಬಾಲಕ‌‌ ಮರುದಿನ ಎಂದಿನಂತೆ ಬೆಳಿಗ್ಗೆ ಎದ್ದು ಶಾಲೆಗೆ ತೆರಳಿದ್ದ.ಶಾಲೆಯಲ್ಲಿ ಮಧ್ಯಾಹ್ನದವರೆಗೆ ಪಾಠ ಕೇಳಿದ್ದ ಬಾಲಕ, ಮಧ್ಯಾಹ್ನದ ಊಟಕ್ಕಾಗಿ ತನ್ನ ಸ್ನೇಹಿತರೊಂದಿಗೆ ಸರದಿಯಲ್ಲಿ ನಿಂತಿದ್ದನು. ಈ ವೇಳೆ ಕೌಶಿಕ್ ಇದ್ದಕ್ಕಿದ್ದಂತೆ ಸರತಿ ಸಾಲಿನಲ್ಲಿ ಕುಸಿದು ಬಿದ್ದಿದ್ದಾನೆ.

ಶಾಲೆಯ ಉಳಿದ ವಿದ್ಯಾರ್ಥಿಗಳು ತಕ್ಷಣವೇ ಶಿಕ್ಷಕರಿಗೆ ಮಾಹಿತಿ ನೀಡಿದ್ದು, ಶಿಕ್ಷಕರು ವಿದ್ಯಾರ್ಥಿಯನ್ನು ವೈದ್ಯರ ಬಳಿಗೆ ಕರೆದೊಯ್ದರು ಈ ವೇಳೆಯಲ್ಲಿ ಕೌಶಿಕ್ ಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಬೇರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ.ಕರೀಂ ನಗರ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಬಾಲಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಬಾಲಕನ ಅಕಾಲಿಕ ನಿಧನದಿಂದ‌ ಕುಟುಂಬ ಆಘಾತಕ್ಕೆ ಒಳಗಾಗಿದೆ.

- Advertisement -

Latest News

error: Content is protected !!