Friday, June 5, 2026
Homeತಾಜಾ ಸುದ್ದಿಯಾವುದೇ ಸಿನಿಮಾ ರಾಜ್ಯದ ಮತ್ತು ದೇಶದ ಗೌರವ ಕಾಪಾಡಬೇಕು: ಹೆಡ್ ಬುಷ್ ಸಿನಿಮಾ‌ ವಿವಾದದ ಬಗ್ಗೆ...

ಯಾವುದೇ ಸಿನಿಮಾ ರಾಜ್ಯದ ಮತ್ತು ದೇಶದ ಗೌರವ ಕಾಪಾಡಬೇಕು: ಹೆಡ್ ಬುಷ್ ಸಿನಿಮಾ‌ ವಿವಾದದ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ

- Advertisement -
- Advertisement -

ಬೆಂಗಳೂರು: ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆ ಜನಪದ ಕಲೆಗೆ ಅಪಮಾನ ಮಾಡಲಾಗಿದೆ ಎಂಬ ವಿಚಾರ ಮಾಧ್ಯಮಗಳ ಮೂಲಕ ನನಗೆ ಮಾಹಿತಿ ಸಿಕ್ಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಸಚಿವ ಸುನೀಲ್ ಕುಮಾರ್, ಈ ಚಲನಚಿತ್ರದಲ್ಲಿ ವೀರಗಾಸೆಗೆ ಅಪಮಾನ ಆಗಿದೆ, ಯಾವುದೇ ಸಿನಿಮಾ ಆದರೂ ರಾಜ್ಯದ ಮತ್ತು ದೇಶದ ಗೌರವ ಕಾಪಾಡಬೇಕು ಎಂದು ಹೇಳಿದ್ದಾರೆ.

ಅಲ್ಲದೇ, ಮನೋರಂಜನೆ ಹೆಸರಿನಲ್ಲಿ ಅಪಮಾನ ಮಾಡುವುದು ಸರಿಯಲ್ಲ, ಈ ಬಗ್ಗೆ ಸಿನಿಮಾ ಮಾಡಿದವರು ಮರುಚಿಂತನೆ ಮಾಡುವುದು ಒಳಿತು ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ. ಚಲನಚಿತ್ರದ ನಿರ್ಮಾಪಕರಿಗೆ ಮರು ಚಿಂತನೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿರುವ ಸುನೀಲ್ ಕುಮಾರ್, ಜನಪದ ಕಲೆಗಳ ಗೌರವಕ್ಕೆ ಚ್ಯುತಿ ತರಬಾರದು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!