Thursday, June 4, 2026
Homeಕರಾವಳಿಪಾಲ್ಕಾಡ್ ನಲ್ಲಿ ಆಟವಾಡುತ್ತಿದ್ದಾಗ ನೀರಿಗೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳು ಸಾವು

ಪಾಲ್ಕಾಡ್ ನಲ್ಲಿ ಆಟವಾಡುತ್ತಿದ್ದಾಗ ನೀರಿಗೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳು ಸಾವು

- Advertisement -
- Advertisement -

ಕೇರಳ: ಆಟವಾಡುತ್ತಿದ್ದ ವೇಳೆ ನೀರಿಗೆ ಬಿದ್ದು ಒಂದೇ ಕುಟುಂಬದ ಮೂವರು ಸಹೋದರರು ಸಾವನ್ನಪ್ಪಿರುವ ಘಟನೆಪಾಲ್ ಕ್ಕಾಡ್ ಜಿಲ್ಲೆಯ ಕುಣಿಶ್ಶೇರಿ ನಡೆದಿದೆ.

ಇಲ್ಲಿನ ಕುದಿರೆಪ್ಪಾರ ನಿವಾಸಿ ಜಸೀರ್ ಎಂಬವರ ಮಕ್ಕಳಾದ  3 ವರ್ಷದ ರಿಫಾಝ್ , 7 ವರ್ಷದ ರಿಂಶಾದ್ ಹಾಗೂ 12 ವರ್ಷದ ಜಿಂಶಾದ್  ಮೃತ ದುರ್ದೈವಿಗಳು.

ಕುಣಿಶ್ಶೇರಿಯ ಕುದಿರೆಪ್ಪಾರ ಎಂಬಲ್ಲಿ ತೋಟದ ಮಧ್ಯೆ ಇರುವ ಕೊಳದಲ್ಲಿ ಘಟನೆ ಸಂಭವಿಸಿದೆ. ಮಾವಿನ ಹಣ್ಣು ತೊಳೆಯಲು 7 ವರ್ಷದ ರಿಂಶಾದ್ ಕೆರೆಗೆ ಇಳಿದಾಗ ಕಾಲು ಜಾರಿ ಬಿದ್ದಿದ್ದಾನೆ.  ಇದನ್ನು ನೋಡಿದ 3 ವರ್ಷ ಪ್ರಾಯದ ರಿಫಾಝ್ ಕೂಡಾ ಕೆರೆಗೆ ಇಳಿದಿದ್ದಾನೆ. ಇಬ್ಬರನ್ನೂ ರಕ್ಷಿಸಲು 12ರ ಹರೆಯದ ಜಿಂಶಾದ್ ಕೆರೆಗೆ ಹಾರಿದ್ದು, ಮೂವರೂ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇವರೊಂದಿಗೆ ಆಟವಾಡುತ್ತಿದ್ದ 8 ವರ್ಷದ ಶೃತಿ ಎಂಬ ಬಾಲಕಿ ಈ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾಳೆ.

ಜಸೀರ್- ರಮ್ಲಾ ದಂಪತಿಗೆ ಇದ್ದ ಈ ಮೂವರು ಮಕ್ಕಳೂ ಮೃತಪಟ್ಟಿದ್ದು, ಮೃತರನ್ನು ಆಲತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಂತರ ಮೃತದೇಹಗಳನ್ನು ಆಲತ್ತೂರಿನ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಕೃಷಿ ಸಚಿವ ವಿ.ಎಸ್ ಸುನೀಲ್ ಕುಮಾರ್, ಆಲತ್ತೂರು ಶಾಸಕ ಕೆ.ಡಿ ಪ್ರಸನ್ನನ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!