- Advertisement -
- Advertisement -
ಬೆಂಗಳೂರು : ಕೋವಿಡ್ 19 ಲಾಕ್‍ಡೌನ್ ಸಂದರ್ಭದಲ್ಲೂ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿರುವ ಬೆಂಗಳೂರು ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಾಲಕ ಸೂರಜ್‍ಕುಮಾರ್ (29), ಮ್ಯಾನೇಜರ್ ಲಕ್ಷ್ಮಣ್ (26) ಹಾಗೂ ನೌಕರ ಜೀತು (21) ಬಂಧಿತ ಆರೋಪಿಗಳು.
ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಫ್-11 ಹುಕ್ಕಾ ಬಾರ್ ಕೋವಿಡ್ 19 ಲಾಕ್‍ಡೌನ್ ಸಂದರ್ಭದಲ್ಲೂ ತೆರೆದು ಗ್ರಾಹಕರಿಗೆ ಅಕ್ರಮವಾಗಿ ಹುಕ್ಕಾ ನೀಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಹುಕ್ಕಾ ಬಾಟಲ್‍ಗಳು, ತಂಬಾಕು ಫ್ಲೇವರ್ ಬಾಕ್ಸ್‍ಗಳು ಹಾಗೂ ಎರಡು ಮದ್ಯದ ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ವಿರುದ್ಧ ಕೋಟ್ಪಾ ಮತ್ತು ಅಬಕಾರಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
- Advertisement -