- Advertisement -
- Advertisement -
ಬೆಳ್ತಂಗಡಿ: ಜಗತ್ತನೇ ತಲ್ಲಣಗೊಳಿಸಿರುವ ಮಾರಕ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳು ತರಕಾರಿ ಸಮಸ್ಯೆ ಎದುರಿಸುತ್ತಿದ್ದು ಇದನ್ನು ಮನಗಂಡ ಲಾಯಿಲದ ದಿ.ಶೀನ ಶೆಟ್ಟಿ ಇವರ ಸ್ಮರಣಾರ್ಥ ಲಾಯಿಲ ಗ್ರಾಮದ 4ನೇ ವಾರ್ಡಿನ ಸುಮಾರು 350 ಕುಟುಂಬಗಳಿಗೆ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಪುಷ್ಪರಾಜ್ ಶೆಟ್ಟಿ, ಲೋಕೋಪಯೋಗಿ ಇಲಾಖಾ ಗುತ್ತಿಗೆದಾರ ವಿಶ್ವನಾಥ ಲಾಯಿಲ , ಅರವಿಂದ ಲಾಯಿಲ, ಉದಯ ಕುಮಾರ್ ಪುತ್ರಬೈಲು ಹಾಗೂ ದಿ.ಶೀನ ಶೆಟ್ಟಿಯವರ ಪುತ್ರರಾದ ಗಣೇಶ ಗ್ಯಾರೇಜ್ ಮಾಲಕ ರಾಜೇಶ್ ಶೆಟ್ಟಿ, ಲಾಯಿಲ ಗ್ರಾ ಪಂ ಸದಸ್ಯರೂ ಆಗಿರುವ ನ್ಯಾಯವಾದಿ ದಿನೇಶ್ ಶೆಟ್ಟಿ, ಕಕ್ಕಿಂಜೆ ಕಾರುಣ್ಯ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಕುಮಾರ್ ಶೆಟ್ಟಿ ,ಜಗದೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
- Advertisement -