Saturday, June 6, 2026
HomeUncategorizedರಾಜ್ಯದಲ್ಲಿಂದು 2627 ಮಂದಿಗೆ ಕೊರೊನಾ ಪಾಸಿಟಿವ್, ಬೆಂಗಳೂರಿನಲ್ಲಿ 1525 ಮಂದಿಯಲ್ಲಿ ಸೋಂಕು ದೃಢ,...

ರಾಜ್ಯದಲ್ಲಿಂದು 2627 ಮಂದಿಗೆ ಕೊರೊನಾ ಪಾಸಿಟಿವ್, ಬೆಂಗಳೂರಿನಲ್ಲಿ 1525 ಮಂದಿಯಲ್ಲಿ ಸೋಂಕು ದೃಢ, 71 ಮಂದಿ ಹೆಮ್ಮಾರಿಗೆ ಬಲಿ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅನ್ನೋ ನರ ರಾಕ್ಷಸ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ದಿನೇ ದಿನೇ ಆತನ ಜೋರಾಗುತ್ತಲೇ ಇದೆಯೇ ಹೊರತು ಕಮ್ಮಿಯಾಗುವ ಯಾವ ಲಕ್ಷಣಗಳು ಕೂಡ ಕಾಣಿಸುತ್ತಿಲ್ಲ. ಇನ್ನು ಇವತ್ತು ರಾಜ್ಯದಲ್ಲಿ ಬರೋಬ್ಬರಿ 2627 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೇ ಒಂದೇ ದಿನ ರಾಜ್ಯದಲ್ಲಿ 71 ಮಂದಿಯ ಪ್ರಾಣ ಕಸಿದುಕೊಂಡಿದೆ ಹೆಮ್ಮಾರಿ.

ಅದರಲ್ಲೂ ಬೆಂಗಳೂರಿನಲ್ಲೇ ಇವತ್ತು 1525 ಮಂದಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ ಕೊರೊನಾ. ಹಾಗೇ ಕೇವಲ ಸಿಲಿಕಾನ್ ಸಿಟಿ ಒಂದರಲ್ಲೇ 45 ಮಂದಿಯನ್ನು ಕೋವಿಡ್ ಬಲಿ ತೆಗೆದುಕೊಂಡಿದೆ. ಇದರಲ್ಲಿ 16 ದಿನದ ಮಗು ಕೂಡ ಸೇರಿದೆ. ರಾಜ್ಯದಲ್ಲಿ ಸದ್ಯ 22,746 ಸಕ್ರೀಯ ಪ್ರಕರಣಗಳಿದ್ದು, ರಾಜ್ಯದಾದ್ಯಂತ 693 ಮಂದಿ ಇವತ್ತು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಚ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಕೊರೊನಾಗೆ 684 ಮಂದಿ ಬಲಿಯಾಗಿದ್ದಾರೆ.

- Advertisement -

Latest News

error: Content is protected !!