Tuesday, May 14, 2024
Homeಕರಾವಳಿಸಾಹಿತಿ ಸುಬ್ರಾಯ ಚೊಕ್ಕಾಡಿಯವರಿಗೆ 80ರ ಸಂಭ್ರಮ: ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸನ್ಮಾನ

ಸಾಹಿತಿ ಸುಬ್ರಾಯ ಚೊಕ್ಕಾಡಿಯವರಿಗೆ 80ರ ಸಂಭ್ರಮ: ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸನ್ಮಾನ

spot_img
- Advertisement -
- Advertisement -

ಸುಳ್ಯ: ಮುನಿಸು ತರವೇ ಮುಗುದೆ ಎಂಬ ಪ್ರಸಿದ್ಧ ಗೀತೆಯನ್ನು ನಾಡಿಗೆ ನೀಡಿದ ಕನ್ನಡ ನಾಡಿನ ಹೆಮ್ಮೆಯ ಕವಿ ಶ್ರೀ ಸುಬ್ರಾಯ ಚೊಕ್ಕಾಡಿ ಸುಳ್ಯ ರವರನ್ನು ಅವರ 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಚಂದನ ಸಾಹಿತ್ಯ ವೇದಿಕೆ , ಸುಳ್ಯ ವತಿಯಿಂದ ಸನ್ಮಾನಿಸಿ ಗೌರವಿಸಿಲಾಯಿತು .

ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ ರವರು ಚೊಕ್ಕಾಡಿರವರನ್ನು ಸನ್ಮಾನಿಸಿ ‘ಹಿರಿಯ ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿಯವರು ನಮ್ಮ ನಾಡಿನ ಶ್ರೇಷ್ಠ ಸಾಹಿತಿ . ಇವರು ಬರೆದ ನೂರಾರು ಕವನಗಳು ಭಾವಗೀತೆಗಳಾಗಿ ಕೇಳುಗರ ಮನಸೂರೆಗೊಂಡಿವೆ. ನಾಡಿನಲ್ಲೆಲ್ಲ ಇವರ ಗೀತೆಗಳನ್ನು ಖ್ಯಾತ ಗಾಯಕರು ಈಗಲೂ ಹಾಡುತ್ತಿದ್ದಾರೆ . ಪ್ರಸಿದ್ಧ ಸಾಹಿತಿ ಸುಳ್ಯದವರು ಅಂತ ಹೇಳಿಕೊಳ್ಳಲು ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ . 80 ವರುಷ ಜನ್ಮದಿನಾಚರಣೆ ಮುಗಿಸಿರುವ ಶ್ರೀಯುತರು 81 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ . ಇವರಿಗೆ ಭಗವಂತನು ಉತ್ತಮ ಆರೋಗ್ಯ , ಆಯಸ್ಸು , ಆನಂದ ಮತ್ತು ನೆಮ್ಮದಿ ನೀಡಿ ಸದಾ ಕರುಣಿಸಲಿ ಎಂದು ಶುಭ ಹಾರೈಸಿದರು.

ಈ ಶುಭ ಸಂದರ್ಭದಲ್ಲಿ ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ , ಕಾರ್ಯಕಾರಿ ಸದಸ್ಯ, ಗಾಯಕ ಪೆರುಮಾಳ್ ಐವರ್ನಾಡು ಹಾಗೂ ಸದಸ್ಯ ಗಾಯಕ ಗಣೇಶ್ ಬಿ ಎಸ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!