Tuesday, May 7, 2024
Homeಕರಾವಳಿಮಂಗಳೂರುಪುತ್ತೂರು : ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ; ಆರೋಪಿಗಳಿಂದ 26 ಲಕ್ಷ ಮೌಲ್ಯದ ವಸ್ತುಗಳ...

ಪುತ್ತೂರು : ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ; ಆರೋಪಿಗಳಿಂದ 26 ಲಕ್ಷ ಮೌಲ್ಯದ ವಸ್ತುಗಳ ವಶ

spot_img
- Advertisement -
- Advertisement -

ಪುತ್ತೂರು : ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಿಂದ 26 ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಹಮ್ಮದ್ ರಫೀಕ್, ಇಬ್ರಾಹಿಂ ಕಲಂದರ್ ಮತ್ತು ದಯಾನಂದ ನನ್ನು ಬಂಧಿಸಲಾಗಿದೆ,

ಬಂಧಿತರಿಂದ 2.40 ಲಕ್ಷ ನಗದು, 2. ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, 12.50. ಲಕ್ಷದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಬ್ರೀಝಾ ಕಾರು ಮತ್ತು ಗ್ಯಾಸ್ ಕಟ್ಟರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

. ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಅಡ್ಯನಡ್ಕ ಫೆಬ್ರವರಿ 7 ರಂದು ಈ ದರೋಡೆ ಪ್ರಕರಣ ನಡೆದಿತ್ತು.ಕರ್ಣಾಟಕ ಬ್ಯಾಂಕಿನಿಂದ ರೂ 17,28,735/- ನಗದು ಹಾಗೂ 696.21 ಗ್ರಾಂ ಚಿನ್ನಭರಣ ಮತ್ತು 1,00,000/- ಮೌಲ್ಯದ ಬೆಳ್ಳಿ ಕಳ್ಳತನ ನಡೆದಿತ್ತು. ಪ್ರಕರಣದ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳಲ್ಲಿ ಮಹಮ್ಮದ್‌ ರಫೀಕ್ @ ಗೂಡಿನ ಬಳಿ ರಫೀಕ್‌ ಎಂಬಾತನ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ -02, ವೇಣೂರು ಪೊಲೀಸ್ ಠಾಣೆಯಲ್ಲಿ -02, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ -01, ವಿಟ್ಲ ಪೊಲೀಸ್‌ ಠಾಣೆಯಲ್ಲಿ -01, ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ -01, ಉಳ್ಳಾಲ ಪೊಲೀಸ್ ಠಾಣೆಯಲ್ಲಿ -01, ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಠಾಣಾ -04, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ -01 , ಬೆಂಗಳೂರು ನಗರದ ವ್ಯಾಪ್ತಿಯಲ್ಲಿ -06 , ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ -01, ಉಡುಪಿ ಜಿಲ್ಲೆಯಲ್ಲಿ-03, ಒಟ್ಟು 23 ಪ್ರಕರಣಗಳು ಇವೆ.

ಮತ್ತೋರ್ರ ಆರೋಪಿ ಇಬ್ರಾಹಿಂ ಕಲಂದರ್‌ ಎಂಬಾತನ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 02, ವಿಟ್ಲ ಪೊಲೀಸ್ ಠಾಣೆಯಲ್ಲಿ 03, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 01, ಮೂಡಬಿದ್ರೆ ಠಾಣೆಯಲ್ಲಿ 01 ಕೇರಳ ರಾಜ್ಯದ ಕುಂಬ್ಳೆ ಪೊಲೀಸ್‌ ಠಾಣೆಯಲ್ಲಿ-01 ಒಟ್ಟು-08 ಪ್ರಕರಣಗಳು ದಾಖಲಾಗಿರುತ್ತವೆ. ಮತ್ತು ಮೂರನೇ ಆರೋಪಿ ದಯಾನಂದ ಎಸ್. ಎಂಬಾತನ ವಿರುದ್ದ ವಿಟ್ಲ ಪೊಲೀಸ್‌ ಠಾಣೆಯಲ್ಲಿ-01ಪ್ರಕರಣ ದಾಖಲಾಗಿರುತ್ತವೆ. ಪ್ರಕರಣದಲ್ಲಿ ಇನ್ನೂ 02 ಜನ ಆರೋಪಿಗಳ ಪತ್ತೆಗೆ ಬಾಕಿ ಇದ್ದು ಸದ್ರಿ ಆರೋಪಿ ಪತ್ತೆಯ ಕಾರ್ಯಾಚರಣೆ ಮುಂದುವರೆದಿದೆ. ಸದ್ರಿ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಮಾನ್ಯ ಪೊಲೀಸ್‌ ಅಧೀಕ್ಷಕರು ನಗದು ಬಹುಮಾನ ಘೋಷಿಸಿರುತ್ತಾರೆ.

- Advertisement -
spot_img

Latest News

error: Content is protected !!