Monday, September 9, 2024
Homeತಾಜಾ ಸುದ್ದಿಕೇರಳದಲ್ಲಿ ಬುಡಕಟ್ಟು ಯುವತಿಯ ಸಾಧನೆ : ಸಮುದಾಯದ ಪ್ರಥಮ ಅಸಿಸ್ಟೆಂಟ್‌ ಕಲೆಕ್ಟರ್ ಆಗಿ‌ ಶ್ರೀಧನ್ಯಾ ಸುರೇಶ್‌...

ಕೇರಳದಲ್ಲಿ ಬುಡಕಟ್ಟು ಯುವತಿಯ ಸಾಧನೆ : ಸಮುದಾಯದ ಪ್ರಥಮ ಅಸಿಸ್ಟೆಂಟ್‌ ಕಲೆಕ್ಟರ್ ಆಗಿ‌ ಶ್ರೀಧನ್ಯಾ ಸುರೇಶ್‌ ಅಧಿಕಾರ ಸ್ವೀಕಾರ

spot_img
- Advertisement -
- Advertisement -

ವೈನಾಡು : ಪ್ರತಿಭೆ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ. ಶ್ರದ್ಧೆ, ನಿಷ್ಠೆ, ಶಿಸ್ತು ಇದ್ದರೆ ಯಾರೂ ಬೇಕಾದರೂ ಸಾಧನೆ ಮಾಡಬಹುದು. ಇದಕ್ಕೆ ಕೇರಳದ ಈ ಯುವತಿಯ ಸಾಧನೆಯೇ ನಿದರ್ಶನವಾಗಿದೆ. ಮನೆಯಲ್ಲಿ ಬಡತನವಿದ್ದರೂ ಈಕೆ ತಂದೆ, ತಾಯಿಯ ಪ್ರೋತ್ಸಾಹದಿಂದಾಗಿ ಕಠಿಣ ಅಭ್ಯಾಸ ನಡೆಸಿ ಎಲ್ಲರೂ ತನ್ನತ್ತ ಹುಬ್ಬೇರಿಸಿ ನೋಡುವಂತೆ ಇತಿಹಾಸ ಸೃಷ್ಟಿಸಿದ್ದಾಳೆ. ಹೌದು… ಬುಡಕಟ್ಟು ಸಮುದಾಯದ ಈ ಯುವತಿ ಪ್ರಪ್ರಥಮವಾಗಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಎಲ್ಲರ ಚಪ್ಪಾಳೆ ಗಿಟ್ಟಿಸಿದ್ದಾರೆ.

ಕಿಟಕಿ ಬಾಗಿಲುಗಳಿಲ್ಲದ, ಮುರುಕಲು ಮನೆಯ ಈ ಯುವತಿಗೆ, ದಿನಗೂಲಿ ಮಾಡಿ ಬದುಕುವ ಅಪ್ಪ ಅಮ್ಮನೇ ಸ್ಪೂರ್ತಿ. ಅಪ್ಪ -ಅಮ್ಮನ ಮುದ್ದಿ ಮಗಳು. ಅತ್ಯಂತ ಕೆಳಸ್ತರದ ಕುರಿಚಿಯ ಬುಡಕಟ್ಟಿನ ಮೊದಲ ಹುಡುಗಿ 26 ಹರೆಯದ ಶ್ರೀಧನ್ಯಾ ಸುರೇಶ್‌ ಈಗ ಕೋಝಿಕೋಡ್‌ ಜಿಲ್ಲೆಯ ಅಸಿಸ್ಟೆಂಟ್‌ ಕಲೆಕ್ಟರ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೂರನೇ ಪ್ರಯತ್ನದಲ್ಲಿ ಐಎಎಸ್‌ ಪೂರ್ಣಗೊಳಿಸಿದ್ದು, ಮಸ್ಸೂರಿಯಲ್ಲಿ ತರಬೇತು ಮುಗಿಸಿ ಬಂದು ಅಧಿಕಾರ ಸ್ವೀಕರಿಸಿದರು. ಈಕೆ ಐಎಎಸ್ ನಲ್ಲಿ ಎಂಟನೇ ರ್‍ಯಾಂಕ್‌ ಪಡೆದಿದ್ದರು. ವಯನಾಡು ಜಿಲ್ಲೆಯಲ್ಲಿರುವ ಕಾಡಿನ ಮಧ್ಯದಲ್ಲಿರುವ ಅವರ ಮನೆಗೆ ರಸ್ತೆಯೂ ಇಲ್ಲ. ಈಗಲೂ ಅರ್ಧ ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಬೇಕು. ಐಎಎಸ್‌ ಪರೀಕ್ಷೆಯ ಮುಖ್ಯ ಸಂದರ್ಶನಕ್ಕೆ ದಿಲ್ಲಿಗೆ ಹೊರಟಾಗ ಧನ್ಯಾರಲ್ಲಿ ದುಡ್ಡೇ ಇರಲಿಲ್ಲ, ಊರವರು, ಹಿತೈಷಿಗಳೆಲ್ಲ 40 ಸಾವಿರ ರೂ. ಒಟ್ಟು ಸೇರಿಸಿ ಕೊಟ್ಟಿದ್ದರು. ಶ್ರೀ ಧನ್ಯಾ ಓದಿದ್ದು, ಮಲಯಾಳಂ ಮಾಧ್ಯಮದ ಶಾಲೆಯಲ್ಲಿ. ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದು, ತನ್ನ ಸಮುದಾಯದಲ್ಲೇ ಯಾರೂ ಈವರೆಗೆ ಮಾಡದ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ…

- Advertisement -
spot_img

Latest News

error: Content is protected !!