ನ್ಯೂಯಾರ್ಕ್/ವಾಷಿಂಗ್ಟನ್, ಮೇ 6-ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 72,000ಕ್ಕೇರಿದ್ದು, ಈ ವಾರದೊಳಗೆ ಒಂದು ಲಕ್ಷ ಮಂದಿ ಅಸು ನೀಗುವ ಆತಂಕವಿದೆ.
ನಿನ್ನೆ ಒಂದೇ ದಿನ ಸೂಪರ್ ಪವರ್ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2,333ಕ್ಕೇರಿದ್ದು, ಈವರೆಗೆ 12 ಲಕ್ಷಕ್ಕೂ ಅಧಿಕ ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನೊಂದು ನಾಲ್ಕೈದು ದಿನಗಳಲ್ಲಿ ಅಮೆರಿಕದಲ್ಲಿ ಮರಣ ಪ್ರಮಾಣ ಒಂದು ಲಕ್ಷ ತಲುಪುವ ಭಾರೀ ಆತಂಕವಿದೆ.
# ಮುಂದಿದೆ ಮತ್ತೊಂದು ಕಂಟಕ :
ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಈಗಾಗಲೇ ಕಿಲ್ಲರ್ ಕೊರೊನಾ ದಾಳಿಯಿಂದ ಕಂಗೆಟ್ಟಿದ್ದು, ಜೂನ್‍ನಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.
ಜೂನ್‍ನಲ್ಲಿ ಪ್ರತಿದಿನ ವೈರಾಣು ಸರಾಸರಿ 3,000 ಜನರನ್ನು ಬಲಿತೆಗೆದುಕೊಳ್ಳಲಿದ್ದು, ದಿನಕ್ಕೆ ಸುಮಾರು ಎರಡು ಲಕ್ಷ ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.