Thursday, June 4, 2026
Homeತಾಜಾ ಸುದ್ದಿಪುಲ್ವಾಮಾ ದಾಳಿ ನೆನಪು: ಪುಲ್ವಾಮಾ ಆ ಕರಾಳ ದಿನಕ್ಕೆ ಎರಡು ವರ್ಷ

ಪುಲ್ವಾಮಾ ದಾಳಿ ನೆನಪು: ಪುಲ್ವಾಮಾ ಆ ಕರಾಳ ದಿನಕ್ಕೆ ಎರಡು ವರ್ಷ

- Advertisement -
- Advertisement -

ನವ ದೆಹಲಿ :ಅಂದು 2019 ಫೆಬ್ರವರಿ 14, ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಒಬ್ಬರಲ್ಲ ಇಬ್ಬರಲ್ಲ ಉಗ್ರರ ಅಟ್ಟಹಾಸಕ್ಕೆ ಅಂದು ಬಲಿಯಾಗಿದ್ದು, ಸುಮಾರು 40 ಯೋಧರು. ಇಡೀ ದೇಶ ನೋವಿನಲ್ಲಿ ಮುಳುಗಿತ್ತು. ಆ ಕರಾಳ ದಿನಕ್ಕೆ ಇಂದು ಎರಡು ವರ್ಷ.
78 ಬಸ್ ಗಳಲ್ಲಿ 2,500 ಯೋಧರು ಜಮ್ಮು ಪ್ರದೇಶದಿಂದ ಹೊರಟಿದ್ದರು. ಈ ವೇಳೆ ಪಾಕಿಸ್ತಾನ್ ಜೈಶ್ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬ, ಪುಲ್ವಾಮಾದಲ್ಲಿ ಯೋಧರಿಂದ ವಾಹನಕ್ಕೆ ತನ್ನ ವಾಹನದಿಂದ ಡಿಕ್ಕಿ ಹೊಡೆದಿದ್ದ. ಆ ವಾಹನದಲ್ಲಿ ಐಇಡಿ ಸ್ಪೋಟಕ ತುಂಬಿಸಿದ್ದ ಕಾರಣ ಬ್ಲಾಸ್ಟ್ ಆಗಿ ಯೋಧರ ದೇಹ ಛಿದ್ರ ಛಿದ್ರವಾಗಿತ್ತು.
ಹುತಾತ್ಮರಾದ ಸಿಆರ್‌ಪಿಎಫ್ ಯೋಧರಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ದೇಶಾದ್ಯಂತ ಅನೇಕ ಗಣ್ಯರು ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.

- Advertisement -

Latest News

error: Content is protected !!