Wednesday, June 3, 2026
Homeತಾಜಾ ಸುದ್ದಿ16 ಯೂ ಟ್ಯೂಬ್ ಚಾನೆಲ್ ಗಳಿಗೆ ಬಿಗ್ ಶಾಕ್ : ಪಾಕಿಸ್ತಾನ ಹಾಗೂ ಭಾರತದ...

16 ಯೂ ಟ್ಯೂಬ್ ಚಾನೆಲ್ ಗಳಿಗೆ ಬಿಗ್ ಶಾಕ್ : ಪಾಕಿಸ್ತಾನ ಹಾಗೂ ಭಾರತದ ಹಲವು ಚಾನೆಲ್ ಗಳು ಬ್ಯಾನ್

- Advertisement -
- Advertisement -

ಹೊಸದಿಲ್ಲಿ: ಸುಳ್ಳು ಮಾಹಿತಿ ಹಾಗೂ ಭಾರತ ವಿರೋಧಿ ಕಂಟೆಂಟ್‌ಗಳನ್ನು ಪ್ರಸಾರ ಮಾಡುವ ಯೂಟ್ಯೂಬ್‌ ಚಾನೆಲ್‌ಗ‌ಳ ವಿರುದ್ಧದ ಸಮರ ಮುಂದುವರಿದಿದೆ.

ಕೇಂದ್ರ ಸರಕಾರವು ಮತ್ತೆ ಪಾಕಿಸ್ಥಾನ ದಿಂದ ಕಾರ್ಯಾಚರಿಸುತ್ತಿದ್ದ 6, ಭಾರತ ಹಾಗೂ ಇತರೆ ದೇಶದ ಚಾನೆಲ್ ಗಳು ಸೇರಿದಂತೆ ಒಟ್ಟು 16 ಯೂಟ್ಯೂಬ್‌ ಚಾನೆಲ್‌ಗ‌ಳನ್ನು ಬ್ಯಾನ್ ಮಾಡಿದೆ.

ಭಾರತದ ರಾಷ್ಟ್ರೀಯ ಭದ್ರತೆ, ವಿದೇ ಶಾಂಗ ನೀತಿ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕುರಿತು ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.ಬ್ಯಾನ್ ಆಗಿರುವ ಚಾನೆಲ್‌ಗ‌ಳು ಹಾಗೂ ಫೇಸ್‌ಬುಕ್‌ ಖಾತೆಗಳ ಸರಾಸರಿ ವೀಕ್ಷಕರ ಸಂಖ್ಯೆ ಸುಮಾರು 68 ಕೋಟಿ ಇತ್ತು ಎಂದೂ ಹೇಳಿದೆ.

- Advertisement -

Latest News

error: Content is protected !!