Monday, June 8, 2026
HomeUncategorizedದೈಹಿಕ ಸಂಬಂಧ ಬೆಳೆಸಿ ಮೋಸಗೊಳಿಸಿದ್ದ ಯುವಕ- ಮದುವೆಯ ದಿನ ಯುವಕ ಮಂಟಪಕ್ಕೆ ಬಾರದೆ ನಾಪತ್ತೆ

ದೈಹಿಕ ಸಂಬಂಧ ಬೆಳೆಸಿ ಮೋಸಗೊಳಿಸಿದ್ದ ಯುವಕ- ಮದುವೆಯ ದಿನ ಯುವಕ ಮಂಟಪಕ್ಕೆ ಬಾರದೆ ನಾಪತ್ತೆ

- Advertisement -
- Advertisement -

ಉಡುಪಿ: 13 ವರ್ಷಗಳಿಂದ ಪ್ರೀತಿಸಿ ಮದುವೆಯ ದಿನ ಯುವಕ ಮಂಟಪಕ್ಕೆ ಬಾರದೆ ನಾಪತ್ತೆ ಯಾಗಿರುವ ಘಟನೆ ವರದಿಯಾಗಿದೆ. ಪರ್ಕಳದ ಗಣೇಶ್ ಎಂಬ ಯುವಕ 13 ವರ್ಷಗಳಿಂದ ಪ್ರೀತಿಸಿದ್ದ ಮಮತ ಎಂಬ ಯುವತಿಯ ಜೊತೆ ವಿವಾಹ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಗಣೇಶ್ ಮದುವೆಯ ದಿನದಂದು ಮಂಟಪಕ್ಕೆ ಬಾರದೆ ಕಾಣೆಯಾದ್ದಾನೆ. ಈ ಘಟನೆಯಿಂದ ನೊಂದ ಯುವತಿ ಗಣೇಶನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

13 ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದುದಾಗಿ ನಂಬಿಸಿದ್ದ ಗಣೇಶ್ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿಹುಡುಗಿ ಎರಡು ಬಾರಿ ಗರ್ಭಿಣಿಯಾಗಿದ್ದಳು.ಐ ವೇಳೆ ಗಣೇಶ್ ಅಬಾರ್ಷನ್ ಮಾಡಿಸಿದ್ದಾನೆ.ಮಾಡುವೆ ಮಾತು ಬಂದಾಗ ಉತ್ಸಾಹ ತೋರದ ಗಣೇಶ್ ಯುವತಿಯ ಒತ್ತಾಯಾದ ಮೇರೆಗೆ ಮದುವೆಗೆ ಒಪ್ಪಿಕೊಂಡಿದ್ದ.ನವೆಂಬರ್ 6 ರಂದು ಮದುವೆ ನಿಶ್ಚಯವಾಗಿತ್ತು, ಆದರೆ ಗಣೇಶ್ ನವೆಂಬರ್ 4 ರಂದು ಇನ್ನೊಬ್ಬ ಹುಡುಗಿಯೊಂದಿಗೆ ಮದುವೆಯಾಗಲು ಸಿದ್ದತೆ ನಡೆಸಿಕೊಂಡಿದ್ದ.ಈ ವಿಷಯ ತಿಳಿದ ಮಮತ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿ ಮದುವೆ ನಿಲ್ಲಿಸಿದ್ದಳು , ಪೊಲೀಸರೊಂದಿಗೆ ನ. 6 ರಂದು ಮಮತ ಅವರನ್ನು ವಿವಾಹ ಆಗುವುದಾಗಿ ಒಪ್ಪಿಕೊಂಡಿದ್ದಾತ ಈಗ ಪರಾರಿಯಾಗಿದ್ದಾನೆ.ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.

- Advertisement -

Latest News

error: Content is protected !!