Friday, June 5, 2026
Homeಶಿವಮೊಗ್ಗಹೊಸ ಟಿಟಿ ವಾಹನಕ್ಕೆ ಪೂಜೆ ಮಾಡಿಸಿ ವಾಪಾಸ್ ಬರುವಾಗ ಭೀಕರ ಅಪಘಾತ ; 13 ಜನ...

ಹೊಸ ಟಿಟಿ ವಾಹನಕ್ಕೆ ಪೂಜೆ ಮಾಡಿಸಿ ವಾಪಾಸ್ ಬರುವಾಗ ಭೀಕರ ಅಪಘಾತ ; 13 ಜನ ಸ್ಥಳದಲ್ಲೇ ಸಾವು

- Advertisement -
- Advertisement -

ಹಾವೇರಿ : ಹೊಸ ಟಿಟಿ ವಾಹನಕ್ಕೆ ಪೂಜೆ ಮಾಡಿಸಿ ವಾಪಾಸ್ ಬರುವಾಗ ಭೀಕರ ಅಪಘಾತವಾಗಿ 13 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಮೃತರೆಲ್ಲಾ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನವರು ಎನ್ನಲಾಗಿದೆ.ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು ಎನ್ನಲಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಸ್ವಗ್ರಾಮಕ್ಕೆ ವಾಪಾಸಾಗುವಾಗ ನಿಂತದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಮೃತರ ಪೈಕಿ ಆದರ್ಶ್ ಎಂಬವರು ಒಂದೂವರೆ ತಿಂಗಳ ಹಿಂದೆ ಹೊಸ ಟಿಟಿ ವಾಹನ ಖರೀದಿಸಿದ್ದರು. ಅದರಲ್ಲಿ ಕುಟುಂಬದವರನ್ನು, ಸ್ನೇಹಿತರನ್ನು ಕರೆದುಕೊಂಡು ಮನೆ ದೇವರಿಗೆ ಪೂಜೆ ಸಲ್ಲಿಸಲೆಂದು ಪ್ರವಾಸ ಹೊರಟಿದ್ದರು. ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ಟೆಂಪಲ್ ನಲ್ಲಿ ವಾಹನ ಪೂಜೆ ಮಾಡಿಸಲಾಗಿತ್ತು. ಹಿಂದಿರುವ ವೇಳೆ ಮಾಯಮ್ಮನ ದೇವಸ್ಥಾನಕ್ಕೆ ತೆರಳಿ ದರ್ಶನ್ ಪಡೆಯಲಾಗಿತ್ತು. ಚಾಲಕ ಆದರ್ಶ್ ವಾಹನ ಪೂಜೆ ಫೋಟೋಗಳನ್ನು ವ್ಯಾಟ್ಸ್‌ಆಯಪ್ ಸ್ಟೇಟಸ್ ಹಾಕಿಕೊಂಡಿದ್ದ.ವಾಪಾಸ್ ಬರುವಾಗ ಅಪಘಾತವಾಗಿದೆ.

ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ 4 ವರ್ಷದ ಹಾಗೂ 6 ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಪರಶುರಾಮ್ (45), ಭಾಗ್ಯ (40), ನಾಗೇಶ್(50), ವಿಶಾಲಾಕ್ಷಿ(50)ಸುಭದ್ರಾ ಭಾಯಿ(65), ಪುಣ್ಯ( 50), ಮಂಜುಳಾ ಭಾಯಿ( 57), ಚಾಲಕ ಆದರ್ಶ್ ( 23), ಮಾನಸಾ( 24), ರೂಪಾ( 40),ಮಂಜುಳಾ( 50) ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!