Saturday, May 18, 2024
Homeತಾಜಾ ಸುದ್ದಿಜೋಮ್ಯಾಟೋ ಹಲ್ಲೆ ಪ್ರಕರಣ: ಯುವತಿಯ ವಿರುದ್ಧ ದೂರು ದಾಖಲಿಸಿದ ಜೋಮ್ಯಾಟೋ ಬಾಯ್

ಜೋಮ್ಯಾಟೋ ಹಲ್ಲೆ ಪ್ರಕರಣ: ಯುವತಿಯ ವಿರುದ್ಧ ದೂರು ದಾಖಲಿಸಿದ ಜೋಮ್ಯಾಟೋ ಬಾಯ್

spot_img
- Advertisement -
- Advertisement -

ಬೆಂಗಳೂರು: ತನ್ನ ವಿರುದ್ಧ ಹಲ್ಲೆ ಆರೋಪ ಮಾಡಿದ್ದ ಯುವತಿ ವಿರುದ್ಧ ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ದೂರು ದಾಖಲಿಸಿದ್ದಾರೆ.

ಆಹಾರ ಡೆಲಿವರಿ ವಿಳಂಬವನ್ನು ಪ್ರಶ್ನಿಸಿದ್ದ ಯುವತಿ ಹಿತೇಶಾ ಚಂದ್ರಾನಿ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ಇಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಕಾಮರಾಜ್ ದೂರು ದಾಖಲಿಸಿದ್ದಾರೆ. ಈ ವೇಳೆ ವಕೀಲ ವಿಕ್ರಂ ಅವರು ಎಫ್‌ಐಆರ್ ದಾಖಲಿಸಲು ಕಾಮರಾಜ್ ಗೆ ನೆರವಾಗಿದ್ದಾರೆ.

ಈ ಘಟನೆ ಬಗ್ಗ ಸ್ಪಷ್ಟನೆ ನೀಡಿರುವ ಜೊಮ್ಯಾಟೋ ಕಂಪನಿ ಹಿತೇಶಾ ಮತ್ತು ಕಾಮರಾಜ್ ರೊದಿಗೆ ನವು ಸಂಪರ್ಕದಲ್ಲಿದ್ದೇವೆ, ಎರಡು ಕಡೆಯ ಕಥೆಗಳನ್ನು ನಾವು ಕೇಳಿದ್ದೇವೆ, ಇಬ್ಬರಿಗೂ ನಾವು ಬೆಬಲ ನೀಡಿದ್ದೇವೆ, ಸತ್ಯ ಹೊರಬರಬೇಕಿದೆ ಎಂದು ಕಂಪನಿ ತಿಳಿಸಿದೆ. 

ಘಟನೆ ಬಳಿಕ ಡೆಲಿವರಿ ಬಾಯ್‌ ಕಾಮ್‌ರಾಜ್‌ನನ್ನು ಜೊಮ್ಯಾಟೊ ಕೆಲಸದಿಂದ ವಜಾಗೊಳಿಸಿದೆ. ಸದ್ಯ ಬಗ್ಗೆ ಪರ-ವಿರೋಧ ಚರ್ಚಗಳು ನಡೆಯುತ್ತಿದೆ. ಸತ್ಯಾಸತ್ಯಾತೆ ತನಿಖೆ ಬಳಿಕವಷ್ಟೆ ಹೊರಬರಬೇಕಿದೆ. ಇಲ್ಲಿಯವರೆಗೂ ಕಾಮರಾಜ್ ಸುಮಾರು 5000 ಫುಡ್ ಡೆಲಿವರಿ ಮಾಡಿದ್ದಾರೆ. ಅವರಿಗೆ 4.75/5 ಸ್ಟಾರ್ ರೇಟಿಂಗ್ಸ್ ಇದೆ, ಕಳೆದ 26 ತಿಂಗಳಿಂದ ಅವರು ನಮ್ಮ ಬಳಿ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

ಮಾರ್ಚ್ 9 ರಂದು ಘಟನೆ ನಡೆದಿತ್ತು. ದೊಡ್ಡತಗೂರು ಪ್ರದೇಶದ 31 ವರ್ಷದ ಯುವತಿ ಹಿತೇಶಾ ಚಂದ್ರಾನೀ ಜೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೂಗಿಗೆ ಪಂಚ್ ಮಾಡಿದ್ದ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದರು. ಅದಾದ ಮರುದಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿದ್ದರು.

ಇನ್ನು ಯುವತಿ ಸುಳ್ಳು ಆರೋಪ ಮಾಡಿದ್ದಾಳೆ ಎಂದು ಹೇಳಲಾಗುತ್ತಿದ್ದು ಬಾಲಿವುಡ್ ತಾರೆಯರು ಹಾಗೂ ಸ್ಯಾಂಡಲ್ ವುಡ್ ತಾರೆಯರು ಅನೇಕರು ಕಾಮರಾಜ್ ಗೆ ಬೆಂಬಲ ನೀಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಯುವತಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!