Saturday, June 6, 2026
Homeಕರಾವಳಿಮಂಗಳೂರು: ಕಾರು ಹಾಗೂ ಬೈಕ್ ಮಧ್ಯೆ ಅಪಘಾತ: ಯುವಕರಿಬ್ಬರಿಗೆ ಗಂಭೀರ ಗಾಯ

ಮಂಗಳೂರು: ಕಾರು ಹಾಗೂ ಬೈಕ್ ಮಧ್ಯೆ ಅಪಘಾತ: ಯುವಕರಿಬ್ಬರಿಗೆ ಗಂಭೀರ ಗಾಯ

- Advertisement -
- Advertisement -

ಮಂಗಳೂರು:  ಬೈಕಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಣ್ಣೀರುಬಾವಿ ಬೀಚ್ ಬಳಿ ನಡೆದಿದೆ.ಬೆಂಗರೆ ನಿವಾಸಿ ನಝೀರ್ ಎಂಬವರ ಮಗ ಮೊಯ್ದಿನ್ ನಾಝಿಮ್ ಮತ್ತು ಅವರ ಸ್ನೇಹಿತ ಸಾಲೆತ್ತೂರು ನಿವಾಸಿ ಅನಸ್ ಗಾಯಗೊಂಡವರು.

ಈದ್ ಮಿಲಾದ್ ಹಿನ್ನೆಲೆ ಕಳೆದ ಶನಿವಾರ ಬೆಂಗರೆ ಮಸೀದಿ ವಠಾರದಲ್ಲಿ ಮದ್ರಸ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮವಿತ್ತು.ಈ ಹಿನ್ನೆಲೆಯಲ್ಲಿ ಸಾಲೆತ್ತೂರ್ನ ಅನಸ್ ತನ್ನ ಸ್ನೇಹಿತನಾದ ಬೆಂಗರೆಯ ಮೊಯ್ದಿನ್ ನಾಝಿಮ್ ಅವರ ಮನೆಗೆ ಬಂದಿದ್ದ.ಸಂಜೆ ನಾಝಿಮ್ ಸಾಲೆತ್ತೂರಿಗೆ ತೆರಳಬೇಕಿದ್ದ ಸ್ನೇಹಿತ ಅನಸ್ ಗೆ ತನ್ನ ಬೈಕ್ನಲ್ಲಿ ಕುಳ್ಳಿರಿಸಿ ಕೂಳೂರು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು.

ಈ ವೇಳೆ ಬೈಕ್ ತಣ್ಣೀರುಬಾವಿ ಬೀಚ್ ಸಮೀಪಿಸುತ್ತಿದ್ದಂತೆ ಹಿಂದಿನಿಂದ ಬಂದ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ.ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!