Wednesday, June 3, 2026
Homeಕರಾವಳಿಮಂಜೇಶ್ವರದ ಯುವಕ ಹಿಮಾಚಲ ಪ್ರದೇಶದಲ್ಲಿ ಸಾವು;ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು

ಮಂಜೇಶ್ವರದ ಯುವಕ ಹಿಮಾಚಲ ಪ್ರದೇಶದಲ್ಲಿ ಸಾವು;ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು

- Advertisement -
- Advertisement -

ಕಾಸರಗೋಡು; ಮಂಜೇಶ್ವರದ ಯುವಕನೊಬ್ಬ ಮಂಜುಗಡ್ಡೆಯಲ್ಲಿ ಸಿಲುಕಿ ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟಿದ್ದು, ಆತನ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ ಮಜೀರ್ ಪಳ್ಳದ ಸಿನಾನ್ (28) ಮೃತಪಟ್ಟ ಯುವಕ.

ಕತ್ತಾರ್ ನಲ್ಲಿ ಉದ್ಯೋಗದಲ್ಲಿದ್ದ ಸಿನಾನ್ ಆರು ತಿಂಗಳ ಹಿಂದೆ ಊರಿಗೆ ಬಂದಿದ್ದರು.ತಿಂಗಳ ಹಿಂದೆ ಹಿಮಾಚಲಪ್ರದೇಶಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಎರಡು ವಾರಗಳ ಹಿಂದೆ ಮನೆಯವರು ಸಂಪರ್ಕಿಸಿದಾಗ ಮೊಬೈಲ್ ಸಿಚ್ಡ್ ಆಫ್ ಆಗಿತ್ತು. ಸೋಮವಾರ ಬೆಳಗ್ಗೆ ಹಿಮಾಚಲ ಪ್ರದೇಶ ಪೊಲೀಸರು ಸಿನಾನ್ ಮಂಜುಗಡ್ಡೆಯಲ್ಲಿ ಸಿಲುಕಿ ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸಂಬಂಧಿಕರು ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ. ಇನ್ನು ಸಾವಿನ ಕುರಿತು ಸಿನಾನ್ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!