Saturday, June 6, 2026
Homeಅಪರಾಧಉಡುಪಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಅತ್ಯಾಚಾರಗೈದು ವಂಚನೆ...!

ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಅತ್ಯಾಚಾರಗೈದು ವಂಚನೆ…!

- Advertisement -
- Advertisement -

ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯೋರ್ವಳನ್ನು ನಂಬಿಸಿ ಅತ್ಯಾಚಾರಗೈದು ಬಳಿಕ ಮದುವೆಗೆ ನಿರಾಕರಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಬಗ್ಗೆ ಯುವತಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಮಣಿಪಾಲ ನಿವಾಸಿ ಪ್ರಶಾಂತ್ ಮೊದಲಿಯಾರ್ ಎಂಬ ವ್ಯಕ್ತಿಯಿಂದ ತನಗೆ ವಂಚನೆಯಾಗಿದೆ ಎಂದು ತಮಿಳುನಾಡಿನ 25 ವರ್ಷದ ಯುವತಿ ದೂರು ನೀಡಿದ್ದಾಳೆ. ದಾಖಲಾದ ದೂರಿನ ಪ್ರಕಾರ ಪ್ರಶಾಂತ್ ಮತ್ತು ಯುವತಿ 2018 ರಿಂದ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಪರಸ್ಪರ ಪರಿಚಿತರಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಶಾಂತ್ ಮದುವೆಯ ಭರವಸೆ ನೀಡಿದ್ದರು. ಜೂನ್ 26, 2021 ರಂದು ಪ್ರಶಾಂತ್ ತಾನು ಕೆಲಸ ಮಾಡುತ್ತಿದ್ದ ಮಣಿಪಾಲಕ್ಕೆ ಹುಡುಗಿಯನ್ನು ಆಹ್ವಾನಿಸಿದ್ದ. ಬಳಿಕ ಮದುವೆಯ ಭರವಸೆ ನೀಡಿ ದೈಹಿಕವಾಗಿ ಬಳಸಿಕೊಂಡಿದ್ದ.

ಆದರೆ ಆ ಬಳಿಕ, ಮದುವೆಯಾಗುವಂತೆ ಕೇಳಿಕೊಂಡಾಗ ಜಾತಕ ಹೊಂದಾಣಿಕೆಯಾಗದ ಕಾರಣವನ್ನು ನೀಡಿ ನಿರಾಕರಿಸಿದ್ದಾಗಿ ಸಂತ್ರಸ್ತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!