Friday, June 5, 2026
Homeಕರಾವಳಿಮಂಗಳೂರು: ಶ್ವಾನದಳದ ಲೀನಾ ನಿಧನ !

ಮಂಗಳೂರು: ಶ್ವಾನದಳದ ಲೀನಾ ನಿಧನ !

- Advertisement -
- Advertisement -

ದಾಖಲೆಗಳಲ್ಲಿ ಲೀನಾ ಎಂಬ ಹೆಸರಿದ್ದರೂ ಸಿಐಎಸ್‌ಎಫ್ ಸಿಬ್ಬಂದಿ ‘ಡೋಲಿ’ ಎಂದೇ ಕರೆಯುತ್ತಿದ್ದ ಲೀನಾ ಇನ್ನಿಲ್ಲ.

ಮಂಗಳೂರಿನ ಬಜ್ಪೆ ಏರ್ ಪೋರ್ಟ್ ನ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಶ್ವಾನದಳದಲ್ಲಿ ಕಾರ್ಯ ನಿರ್ವಹಿಸುತ್ತಾ ಬಾಂಬ್ ಪತ್ತೆ ಕಾರ್ಯದಲ್ಲಿ ಲಾಬ್ರಡೋರ್ ಜಾತಿಗೆ ಸೇರಿದ ಶ್ವಾನ ಲೀನಾ ಅನಾರೋಗ್ಯದಿಂದ ಸಾವನ್ನಪ್ಪಿದೆ.

ಕಳೆದ ವರ್ಷ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಇರಿಸಿದ್ದ ಬಾಂಬ್ ಪತ್ತೆ ಮಾಡಿದ ಹೆಗ್ಗಳಿಕೆಯು ಲೀನಾಗೆ ಸಲ್ಲಿತ್ತು. ಈ ವರ್ಷದ ಫೆಬ್ರವರಿಯಿಂದ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಲೀನಾ ಸಾವನ್ನಪ್ಪಿದ್ದಾಳೆ.

ಲೀನಾಳನ್ನು ಸೇನಾ ಗೌರವದೊಂದಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ಶ್ವಾನದಳ ವಿಭಾಗದ ನಾಲ್ಕು ಶ್ವಾನಗಳಲ್ಲಿ ಲೀನಾ ಅತ್ಯಂತ ಚುರುಕು ಹಾಗೂ ಎಲ್ಲರಿಗೂ ಪ್ರೀತಿ ಪಾತ್ರಳೂ ಆಗಿದ್ದಳು.

- Advertisement -

Latest News

error: Content is protected !!